ವಿಜಯಪುರ, ಏ. ೧೮: ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿಲ್ಲದೆ ಪಕ್ಷದ ಕಾರ್ಯಕರ್ತರು ಅನುಭವಿಸಿದ ತೊಂದರೆಗಳು ನೂರಾರು ಇದ್ದು, ಕ್ಷೇತ್ರz ಅಭಿವೃದ್ಧಿಯಲ್ಲಿಯೂ ಸಹ ಹಿನ್ನಡೆಯಾಗಿದ್ದು, ಇದೀಗ ಮತ್ತೆ ಚುನಾವಣೆ ಬಂದಿದ್ದು ಚುನಾವಣಾ ಪೂರ್ವ ಸಮೀಕ್ಷೆಗಳಂತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದ್ದು, ಪಕ್ಷದ ಹಿರಿಯ ನಾಯಕರು ಕೇಂದ್ರ ಸಚಿವರು ಆಗಿದ್ದ ಕೇಚ್ ಮುನಿಯಪ್ಪ ರವರನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷದ ಒಗ್ಗಟ್ಟನ್ನು ತೋರ್ಪಡಿಸಬೇಕಾಗಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಎನ್ ಸತೀಶ್ ಕುಮಾರ್ ತಿಳಿಸಿದರು.
ಅವರು ಇಲ್ಲಿನ ಗೌರಿಶಂಕರ್ ಕಲ್ಯಾಣ ಮಂಟಪದ ಮುಂಭಾಗದಿಂದ ದೇವನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಾಮಿನೇಷನ್ ಸಲ್ಲಿಸಲಿರುವ ಕೆ.ಎಚ್ ಮುನಿಯಪ್ಪ ರವರ ಬೃಹತ್ ರಸ್ತೆ ರ್‍ಯಾಲಿಗೆ ಪಕ್ಷದ ಕಾರ್ಯಕರ್ತರ ಹೊರಡುವಿಕೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ನ ಪುರಸಭಾ ಮಾಜಿ ಸದಸ್ಯರುಗಳಾದ ಎಂ ವೀರಣ್ಣ, ಮುನಿ ಚಿನ್ನಪ್ಪ, ಸಂಪತ್ ಕುಮಾರ್, ಮುನಿಕೃಷ್ಣಪ್ಪ, ಮುಖಂಡರುಗಳಾದ ಮಧು, ಅಣ್ಣಮ್ಮ ತಾಯಿ ಸುರೇಶ್, ವಿನಯ್, ಮರವೇ ಕೆಂಪಣ್ಣ ಮತ್ತಿದರೆ ಮುಖಂಡರುಗಳು ಇದ್ದರು.