ಕೆಎಚ್‌ಮುನಿಯಪ್ಪ ಗೆಲುವಿಗೆ ಶ್ರಮಿಸಲು ಕರೆ

ವಿಜಯಪುರ.ಏ೨೫:ಪಟ್ಟಣದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಕೇಂದ್ರ ಸಚಿವ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ಎಚ್ ಮುನಿಯಪ್ಪರವರ ಗೆಲುವಿಗೆ ಶ್ರಮಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ, ವಿ ಮಂಜುನಾಥ್ ತಿಳಿಸಿದರು.
ಅವರು ಇಲ್ಲಿನ ಪರಿವೀಕ್ಷ್ಣಣಾ ಮಂದಿರದ ಮುಂಭಾಗದಿಂದ ದೇವನಹಳ್ಳಿಯ ಚಿಕ್ಕ ಸಣ್ಣೆ ಗೇಟ್ನಲ್ಲಿ ನಡೆಯಲಿರುವ ಎಸ್ ಟಿ ಸಮಾವೇಶಕ್ಕೆ ವಿಜಯಪುರ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಹೊರಟ ಕಾಂಗ್ರೆಸ್ ಕಾರ್ಯಕರ್ತರಿಗೆ ಶುಭಾಶಯ ತಿಳಿಸಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿರುವ ಅಭಿವೃದ್ಧಿ ಕೆಲಸಗಳಿಂದ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಮತ್ತೆ ಬರುತ್ತದೆ ಎಂದು ತಿಳಿಸಿದರು.
ಚುನಾವಣೆ ಕೇವಲ ೧೫ ದಿನಗಳು ಮಾತ್ರವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚತವಾಗಿದೆ. ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಟೌನ್ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ವೇಣು ಮಾತನಾಡಿ, ಸರ್ವರನ್ನು ಒಟ್ಟಾಗಿ ಕರೆದೊಯ್ಯುವ ಕಾಂಗ್ರೆಸ್ ಸರಕಾರ ಈ ಬಾರಿ ರಾಜ್ಯದಲ್ಲಿ ಸರಕಾರ ಬರುವುದು ನಿಚ್ಚಳವಾಗಿದೆ. ನಾಡಿನ ಜನತೆ ಕಾಂಗ್ರೆಸ್ ಸರಕಾರ ಕೊಡುವ ಭರವಸೆಗಳು ಯಾವುದು ಸುಳ್ಳು ಆಗುವುದಿಲ್ಲ ಕೊಟ್ಟ ಬೇಡಿಕೆಗಳು ಈಡೇರಿಸುತ್ತದೆ ಎಂದರು.
ಟೌನ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ನಾಗರಾಜ್ ಮಾತನಾಡಿ, ದೇಶದ ಪ್ರಧಾನಿ ಮೋದಿ ಅವರು ಸಾಧನೆಗಳೇ ಇಲ್ಲದೇ ಮಾತಾಡಿ, ಮಾತಾಡಿ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಹೊರೆತು ದೇಶದ ಜನತೆ ಕೊಟ್ಟ ಮಾತನ್ನು ಉಳಿಸಿಕೊಂಡು ದಿನ ಬಳಕೆಯ ವಸ್ತುಗಳ ಬಗ್ಗೆ ಗಮನಹರಿಸಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದೇನಹಳ್ಳಿ ಮುನಿಯಪ್ಪ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಬಾರಕ್, ಟೌನ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಫ್ಜಲ್, ಮಂಡಿಬೆಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ್, ವಿಜಯಪುರ ಟೌನ್ ಕಾಂಗ್ರೆಸ್ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.