ಕೆಎಂಎಫ್ ಅಮೂಲ್ ವಿಲೀನ ಪ್ರಸ್ತಾವನೆ ಇಲ್ಲ

ಕೋಲಾರ, ಮೇ ೨:ಕೆ.ಎಂ.ಎಫ್ ಒಕ್ಕೂಟವು ಅಮುಲ್‌ನೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಅಮುಲ್‌ನ ಹಾಲು,ಮೊಸರು ಹೊರತು ಪಡೆಸಿ ಇತರೆ ಉತ್ಪನ್ನಗಳನ್ನು ಆನ್‌ಲೈನ್ ವ್ಯವಸ್ಥೆಯಲ್ಲಿ ಪೂರೈಕೆ ಮಾಡುವುದಾಗಿ ಘೋಷಿಸಿ ಕೊಂಡಿದೆ ಹೊರತಾಗಿ ರಾಜ್ಯ ಸರ್ಕಾರದೊಂದಿಗೆ ಯಾವೂದೇ ಉತ್ಪನ್ನಗಳ ಮಾರುಕಟ್ಟೆ ಅಥಾವ ಮಾರಾಟದ ಒಪ್ಪಂದಗಳು ಇಲ್ಲ ಎಂದು ಬಿಜೆಪಿ ರಾಜ್ಯ ಹಾಲು ಪ್ರಕೋಷ್ಠ ರಾಜ್ಯ ಸಂಚಾಲಕ ಡಿ. ಎಂ. ವೆಂಕಟೇಶ್ ತಿಳಿಸಿದರು,
ನಗರದ ಬಿಜೆಪಿ ಕಾರ್ಯಾಲಯದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ದೇಸಿಯ ಉತ್ಪನ್ನಗಳಿಗೆ ಯಾವೂದೇ ರಾಜ್ಯದಲ್ಲಿ ಮುಕ್ತ ಮಾರುಕಟ್ಟೆ ಇದೆ ಹಾಗಾಗಿ ಅಮುಲ್ ಉತ್ಪನ್ನಗಳನ್ನು ರಾಜ್ಯದಲ್ಲಿ ಮಾರಾಟ ಮಾಡದಂತೆ ನಿಷೇದಿಸಲು ಸಾಧ್ಯವಿಲ್ಲ. ಕಳೆದ ೨೦೧೬ ರಿಂದ ಅಮುಲ್ ಉತ್ಪನ್ನಗಳು ಮಾರಾಟ ಮಾಡಲಾಗುತ್ತಿದೆ ಹೊಸದಾಗಿ ಏನೂ ಮಾಡಿಲ್ಲ. ಧಾರವಾಡ ಮತ್ತು ಬೆಳಗಾಂ ಜಿಲ್ಲೆಯಲ್ಲಿ ಮಾರಾಟ ಪ್ರಾರಂಭಿಸಿದರು ಅದರೆ ಯಶಸ್ವಿಯಾಗಿಲ್ಲ ಈಗಾ ಮತ್ತೆ ಮಾರುಕಟ್ಟೆ ಮಾಡಲು ಪ್ರಯತ್ನಿಸಿದೆ. ಇದೇ ರೀತಿ ನಮ್ಮ ರಾಜ್ಯದ ನಂದಿನಿ ಹಾಲಿನ ಉತ್ಪನ್ನಗಳು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮಾರುಕಟ್ಟೆ ಮಾಡುತ್ತಿದೆ ದೇಶದ ಯಾವೂದೇ ರಾಜ್ಯ, ಜಿಲ್ಲೆಗಳಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತ ಸ್ವಾತಂತ್ರ್ಯ ಸಂವಿಧಾನದಲ್ಲಿದೆ ಎಂದರು.
ಕಾಂಗ್ರೇಸ್ ಪಕ್ಷವು ಚುನಾವಣೆಯ ಹಿನ್ನಲೆಯಲ್ಲಿ ಕೆ.ಎಂ.ಎಫ್ ಒಕ್ಕೂಟವನ್ನು ಗುಜರಾತಿನ ಅಮುಲ್ ಸಂಸ್ಥೆಯೊಂದಿಗೆ ವಿಲೀನಗೊಳಿಸಲಾಗುವುದು ಮುಂದಿನ ದಿನಗಳಲ್ಲಿ ನಂದಿನಿ ಹೋಗಿ ಅಮುಲ್ ಚಾಲ್ತಿಗೆ ಬರಲಿದೆ. ಇದರಿಂದ ರಾಜ್ಯದ ಹೈನುಗಾರಿಕೆ ಮೇಲೆ ಭಾರಿ ಪರಿಣಾಮ ಬೀರಲಿದ್ದು ಹೈನೋದ್ಯಮವನ್ನೆ ನಂಬಿದ್ದ ರೈತರು ಮುಂದಿನ ದಿನಗಳಲ್ಲಿ ಭಾರಿ ನಷ್ಟಕ್ಕೆ ತುತ್ತಾಗಿ ಬೀದಿಪಾಲು ಅಗಲಿದ್ದಾರೆ ಎಂಬ ಅಪಪ್ರಚಾರ ಮಾಡುವ ದಿಕ್ಕು ತಪ್ಪಿಸುತ್ತಿದೆ ಚುನಾವಣೆಯಲ್ಲಿ ಲಾಭ ಮಾಡಿ ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅರೋಪಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ,ವೇಣುಗೋಪಾಲ್ ಅವರು ಮಾತನಾಡಿ ರಾಜ್ಯಕ್ಕೆ ಮೋದಿಯವರು ನೀಡಿರುವ ಸಂದೇಶಗಳನ್ನು ಪುನರುಚ್ಚಿಸಿದರು. ಮನ್ ಕೀ ಬಾತ್ ಶತಮಾನೋತ್ಸವದ ಆಚರಣೆಯ ಕಾರ್ಯಕ್ರಮವು ವಿಶ್ವಸಂಸ್ಥೆಯಲ್ಲ ಪ್ರಸಾರವಾಗಿದ್ದು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ. ರಾಜಕೀಯೇತರ ವಿಚಾರಗಳು ಸಂವಾಹನ ನಡೆಸುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವಂತ ಸಾಮಾನ್ಯರಿಗೂ ಅವಕಾಶವನ್ನು ಕಲ್ಪಿಸಿತ್ತು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಪ್ರಕೋಷ್ಠ ವಕ್ತಾರ ಆನಂದ್ ಬಾಬು, ಜಿಲ್ಲಾ ಮಾದ್ಯಮ್ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಬಿಜೆಪಿ ಕಾರ್ಯದರ್ಶಿ ರಾಜೇಶ್ ಸಿಂಗ್, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ ಉಪಸ್ಥಿತರಿದ್ದರು,