ಕೆಎಂಎಫ್‌ಗೆ ಆಂಧ್ರ ಸಚಿವೆ ಉಷಾ ಭೇಟಿ

ನಗರದ ಡೈರಿ ವೃತ್ತದಲ್ಲಿರುವ ಕರ್ನಾಟಕ ಹಾಲು ಮಾರಾಟ ಕೇಂದ್ರ ಕಚೇರಿಗೆ ಆಂಧ್ರಪ್ರದೇಶ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ಶ್ರೀ ಚರಣ್ ಭೇಟಿನೀಡಿದ್ದರು. ಕಮಹಾ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರು, ಸೆ. ೧೮- ಕಹಾಮ ಕೇಂದ್ರ ಕಛೇರಿಗೆ ಆಂಧ್ರಪ್ರದೇಶ ಸರ್ಕಾರದ ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವೆ ಉಷಾ ಚರಣ್‌ರವರು ಆಂಧ್ರ ಪ್ರದೇಶ ರಾಜ್ಯದ ಪ್ರತಿಷ್ಠಿತ ಯೋಜನೆಯಾದ ಙSಖ Sಚಿmಠಿooಡಿಟಿಚಿ Poshಚಿಟಿಚಿ ಅಡಿಯಲ್ಲಿ ಮಾಹೆಯಾನ | ಕೋಟಿ ಲೀಟರ್ ಹಾಲು ಸರಬರಾಜು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಾಲಿನ ಸರಬರಾಜು ಹಾಗೂ ಕರ್ನಾಟಕ ಹಾಲು ಮಹಾಮಂಡಳದೊಂದಿಗೆ ಉತ್ತಮ ಭಾಂದವ್ಯ ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.
ಙSಖ Sಚಿmಠಿooಡಿಟಿಚಿ Poshಚಿಟಿಚಿ ಯೋಜನೆಯ ಮಾಹಿತಿ ಆಂಧ್ರ ಪ್ರದೇಶ ರಾಜ್ಯದ ಪ್ರತಿಷ್ಠಿತ ಙSಖ Sಚಿmಠಿooಡಿಟಿಚಿ Poshಚಿಟಿಚಿ ಯೋಜನೆಯು ನವೆಂಬರ್ ೨೦೧೬ ರಂದು ಮಾಹೆಯಾನ ೧೩ ಲಕ್ಷ ಲೀಟರ್ ಹಾಲಿನೊಂದಿಗೆ ಪ್ರಾರಂಭಗೊಂಡು ಹಂತ ಹಂತವಾಗಿ ಪ್ರಸ್ತುತ ಮಾಹೆಯಾನ ಅಂದಾಜು | ಕೋಟಿ ಲೀಟರ್ ಹಾಲು ಸರಬರಾಜಿಗೆ ತಲುಪಿದೆ ಎಂದು ಹೇಳಿದರು.
ಆಂಧ್ರ ಪ್ರದೇಶದ ೧೩ ಜಿಲ್ಲೆಗಳನ್ನು ಒಳಗೊಂಡ ೨೬ ಲಕ್ಷ ಫಲಾನುಭವಿಗಳೊಂದಿಗೆ ೫೫,೬೦೦ ಅಂಗನವಾಡಿ ಕೇಂದ್ರಗಳನ್ನು
ಒಳಗೊಂಡಿರುವ ಙSಖ Sಚಿmಠಿooಡಿಟಿಚಿ Poshಚಿಟಿಚಿ ಯೋಜನೆಯಡಿಯಲ್ಲಿ ಕಹಾಮವು ನಂದಿನಿ ಯುಹೆಚ್ ಹಾಲನ್ನು ಆಂಧ್ರಪ್ರದೇಶ ರಾಜ್ಯಕ್ಕೆ ಸರಬರಾಜು ಮಾಡಲಾಗುತ್ತಿದೆ. ೨೦೦, ೫೦೦ ಹಾಗೂ ೧೦೦೦ ಮಿ.ಲಿ ಮೊಟ್ಟಣಗಳಲ್ಲಿ ಟೆಟ್ರಾಪ್ಯಾಕ್ ಹಾಗೂ ೨೦೦, ೫೦೦ಮಿ.ಲಿ ಪ್ಲೆಕ್ಸಿ ಮೊಟ್ಟಣಗಳಲ್ಲಿ ಸರಬರಾಜು ಮಾಡಲಾಗುತ್ತಿದೆ ಎಂದರು.
ಕಹಾಮ ಹಾಗೂ ಹಾಲು ಒಕ್ಕೂಟಗಳ ಕಾರ್ಯಚಟುವಟಿಕೆಗಳ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಸಚಿವರು ಮಹಾಮಂಡಳದ ಪ್ರಗತಿಯನ್ನು ಶ್ಲಾಘಿಸಿದರು. ಈ ಸಂಧರ್ಭದಲ್ಲಿ ಕಹಾಮದ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀ ಬಿ.ಸಿ ಸತೀಶ್ ರವರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.