ಕೆಇಬಿಯವರ ನಿರ್ಲಕ್ಷ್ಯದಿಂದಲೇ ಕುರಿ ಬಲಿ ಪಡೆದ ವಿದ್ಯುತ್ ಟಿಸಿ ಕಲೆಕ್ಷನ್ ಬೀರನಳ್ಳಿ ಗ್ರಾಮಸ್ಥರ ಆರೋಪ

ಸೇಡಂ,ಎ,29: ತಾಲೂಕಿನಲ್ಲಿ ಬರುವ ಬೀರನಳ್ಳಿಯಲ್ಲಿ ಕಳೆದ ಒಂದು ವಾರದಿಂದ ಮೂರು ಕುರಿಗಳು ವಿದ್ಯುತ್ ತಗುಲಿ ಸಾವನ್ನಪ್ಪುತ್ತಿದ್ದು ಇದಕ್ಕೆ ನೇರ ಹೊಣೆ ಕೆಬಿಯವರ ನಿರ್ಲಕ್ಷ್ಯದಿಂದಲೇ ಎಂದು ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ. ಕುರಿಗಳು ಸಾವನ್ನಪ್ಪಿವೆ ಆದರೆ ಮನುಷ್ಯನಿಗೆ ವಿದ್ಯುತ್ ಸಂಪರ್ಕದಿಂದ ಸಾವನ್ನಪ್ಪಿದ್ದರೆ ಯಾರನ್ನು ಕೇಳಬೇಕಾಗಿತ್ತು ಎಂದು ವಿದ್ಯುತ್ ಸಂಪರ್ಕ ಅಧಿಕಾರಿಗಳಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.ಅಧಿಕಾರಿಗಳು ಉತ್ತರ ನೀಡದೆ ಮೌನವಾದರು.ರೈತರ ಮಹಿಳೆ ಶರಣಮ್ಮ ಗಂಡ ಗಣಪತಿ ಅವರ(12000/-) ಸಾವಿರ ಬೆಲೆಬಾಳುವ ಕುರಿ ವಿದ್ಯುತ್ ತಗಲಿ ಸಾವನ್ನಪ್ಪಿದೆ.ಕೆಬಿ ಅವರ ಮೇಲೆ ಖಾಸಗಿಯವರಿಗೆ ವಿದ್ಯುತ್ ಸಂಪರ್ಕ ತೆಗೆದುಕೊಂಡವರು ವಿದ್ಯುತ್ ವೈರ ಕೆಳಗಡೆ ಹಾಕಿರುವುದು ಮೇಲ್ಗಡೆ ಹಾಕದೇ ಇರುವುದರಿಂದ ಈ ಘಟನೆ ನಡೆದಿದೆ ಆದ್ದರಿಂದ ಖಾಸಗಿಯವರ ಮೇಲು ಕೇಸ್ ಮಾಡಲು ಮಳಖೇಡ ಪೆÇೀಲೀಸ್ ಸ್ಟೇಷನ್ನಿಗೆ ತೆರಳುವೆ ಎಂದು ಕನಸಿನ ಭಾರತ ಪತ್ರಿಕಾ ವರದಿಗಾರ ಮುಂದೆ ಅಳಲು ತೋಡಿಕೊಂಡರು. ಕೆಬಿಯವರಿಗೆ ಅನೇಕ ಬಾರಿ ಈ ವಿದ್ಯುತ್ ಟಿಸಿಯಿಂದ ಅನಾಹುತವಾಗುತ್ತದೆ ಇದರ ಬಗ್ಗೆ ವಿದ್ಯುತ್ ಟಿಸಿ ಸುತ್ತಮುತ್ತ ತಂತಿ ಬೇಲಿ ನಿರ್ಮಿಸಿ ಎಂದು ಗಮನಕ್ಕೆ ತಂದರು, ನಿರ್ಲಕ್ಷ್ಯ ವಹಿಸಿದರಿಂದ ಇಂದು ಮತ್ತೊಂದು ಕುರಿ ಬಲಿ ಪಡೆದಿದೆ, ಒಟ್ಟು ವಾರದಲ್ಲಿ ಮೂರು ಕುರಿ ಸಾವನ್ನಪ್ಪಿವೆ. ಖಾಸಗಿಯವರಿಗೆ ವಿದ್ಯುತ್ ಕಲೆಕ್ಷನ್ ನೀಡಿದ್ದರಿಂದ ಹುಲ್ಲು ತಿನ್ನಲು ಹೋದ ಕುರಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದೆ ಎಂದು ಕುಕುಂದಾ ಮಾಜಿ ಗ್ರಾಪಂ ಉಪಾಧ್ಯಕ್ಷರಾದ ಮಿರಾಜ್ ಪಟೇಲ್ ಕೆಬಿಯವರ ಮೇಲೆ ದೂರಿದರು.ವಿದ್ಯುತ್ ತಗುಲಿ ಕುರಿಯು ಸಾವನ್ನಪ್ಪಿದ್ದರೆ ಪಶು ಆಸ್ಪತ್ರೆಯ ವೈದ್ಯರಿಂದ ವರದಿ ನೀಡಿದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಶಂಕರ್ ಮಳಖೇಡ ವಿದ್ಯುತ್ ಸಂಪರ್ಕ ಅಧಿಕಾರಿಗಳು.