ಕೆಆರ್ ಮಾರುಕಟ್ಟೆ ಅಡಮಾನ ಮುಕ್ತ ಇಂದಿರಾ ಕ್ಯಾಂಟೀನ್‌ಗೆ ೮೦ ಕೋ ರೊ

ಬೆಂಗಳೂರು, ಮಾ. ೨೭- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂದು ಮಂಡಿಸಲಾದ ನಗರದ ಇತಿಹಾಸದ ಪ್ರಸಿದ್ಧ ಕೃಷ್ಣರಾಜ ಮಾರುಕಟ್ಟೆ ಅಡಮಾನ ಮುಕ್ತಗೊಳಿಸಲಾಗಿದೆ.
ಆರ್ಥಿಕ ಕೊರತೆಯಿಂದ ಇಂದಿರಾ ಕ್ಯಾಂಟೀನ್ ನಿಲ್ಲಿಸುವ ಪ್ರಸ್ತಾಪವಿತ್ತು. ಆದರೆ ಬಜೆಟ್ ಪುಸ್ತಕದಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲದಿದ್ದರೂ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ೮೦ ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಪಾಲಿಕೆಯ ಕೌನ್ಸಿಲ್ ಕಟ್ಟಡ ನವೀಕರಣಕ್ಕೆ ೧೦ ಕೋಟಿ, ಆಸ್ತಿತೆರಿಗೆಯಿಂದ ೨,೮೦೦ ಕೋಟಿ, ವಿವಿಧ ಕರಗಳಿಂದ ೩,೫೦೦ ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ಹಣಕಾಸು ಆಯುಕ್ತೆ ತುಳಸಿ ಮೈದಿನಿ ಮುಂಗಡ ಪತ್ರದಲ್ಲಿ ಪ್ರಕಟಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ೩೮ ಕೋಟಿ ರೂ. ಬಾಡಿಗೆ ಸಂಗ್ರಹ ಗುರಿ ಹೊಂದಲಾಗಿದ್ದು, ೧೧೬ ಮಾರುಕಟ್ಟಿ ಸಂಕೀರ್ಣ, ೫,೯೧೮ ಅಂಗಡಿಗಳ ಬಾಡಿಗೆಯಿಂದ ವರ್ಷಕ್ಕೆ ೨೩ ಕೋಟಿ ರೂ. ಸಂಗ್ರಹವಾಗುತ್ತಿದೆ. ಈ ಪ್ರಮಾಣವನ್ನು ೩೮ ಕೋಟಿ ರೂ.ಗೆ ನಿರೀಕ್ಷಿಸಲಾಗಿದೆ.
ಇಂದಿರಾ ಕ್ಯಾಂಟೀನ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ೮೦ ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಹೇಳಿದರು.
ಇದರ ಜೊತೆಗೆ ಒಎಫ್‌ಸಿ ಕೇಬಲ್ ಅಳವಡಿಕೆಯಿಂದ ೧೦೫ ಕೋಟಿರೂ. ಸಂಗ್ರಹ ಗುರಿ ಹೊಂದಲಾಗಿದ್ದು, ನಗರದಲ್ಲಿ ೪ ಲಕ್ಷ ೧೦ ಸಾವಿರ ಆಸ್ತಿ ಮಾಲೀಕರು ಸಮರ್ಪಕ ಘೋಷಿಸಲಿಲ್ಲ. ಈ ಸಂಬಂಧ ೭೮ ಸಾವಿರಿ ನೋಟಿಸ್‌ಗಳನ್ನು ನೀಡಲಾಗಿದ ಎಂದು ಹೇಳಿದರು.