ಕೆಆರ್ ಪುರದಲ್ಲಿ ಜೆಮಿನಿ ಸರ್ಕಸ್

ಕೆಆರ್ ಪುರ, ಮಾ.೨೮- ಕೆ.ಆರ್.ಪುರದ ಐಟಿಐ ಮೈದಾನದಲ್ಲಿ ಜೆಮಿನಿ ಸರ್ಕಸ್ ಏರ್ಪಡಿಸಿದ್ದು ೪೦ ದಿನಗಳ ಕಾಲ ಶೋ ನಡೆಯಲಿದೆ ಎಂದು ಜೆಮಿನಿ ಸರ್ಕಸ್ ನ ಆಯೋಜಕ ಪ್ರೇಮನಾಥ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಹೆಸರಾಂತ ಕಲಾವಿದರ ತಂಡದಿಂದ ಜೆಮಿನಿ ಸರ್ಕಸ್ ನಡೆಯಲಿದ್ದು ರೋಚಕ ಮತ್ತು ಅದ್ಭುತ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಪ್ರಾಣಿಗಳ ಪ್ರದರ್ಶನ ನಿಷೇಧದ ನಂತರ ಸರ್ಕಸ್ ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ರಷ್ಯಾ ಸಹಿತ ವಿವಿಧ ದೇಶಗಳ ಕಲಾವಿದರನ್ನು ಬಳಸಿಕೊಂಡು ಸರ್ಕಸ್ ಪ್ರದರ್ಶನ ನೀಡುವ ಮೂಲಕ ಸರ್ಕಸ್ ನ ಜನಾಕರ್ಷಣೆ ಹೆಚ್ಚಿಸುವ ಕಾರ್ಯದಲ್ಲಿ ಜೆಮಿನಿ ಸರ್ಕಾಸ್ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ನಾಗರಿಕರಿಗೆ ರಜಾ ಕಾಲದಲ್ಲಿ ಶುದ್ದ ಮನರಂಜನೆ ನೀಡುವ ಉದ್ದೇಶದಿಂದ ಬೆಂಗಳೂರಿನ ಕೆ.ಆರ್.ಪುರಂ ನ ದೂರವಾಣಿ ನಗರದ ಐಟಿಐ ಮೈದಾನದಲ್ಲಿ ಜೇಮಿನಿ ಸರ್ಕಸ್ ಪ್ರದರ್ಶನ ನಡೆಯುತ್ತಿದೆ ಎಂದು ಹೇಳಿದರು.
ಕೆ.ಆರ್.ಪುರಂನಲ್ಲಿ ಪ್ರದರ್ಶನವಾಗು
ತ್ತಿರುವ ಜೇಮಿನಿ ಸರ್ಕಸ್ ನಲ್ಲಿ ರಷ್ಯಾ, ತಾಂಜೇನಿಯಾ, ಇಥಿಯೋಪಿಯ ಹಾಗೂ ಭಾರತದ ವಿವಿಧ ಭಾಗದ ಹೆಸರಾಂತ ಕಲಾವಿದರು ವೈವಿಧ್ಯಮಯ ರೋಮಾಂಚನಕಾರ ಎಂದರು.
ದಿನನಿತ್ಯ ಮೂರು ಶೋ ಗಳು ನಡೆಯಲಿದ್ದು ೧೫೦, ೨೫೦, ೩೫೦ ಹಾಗೂ ೫೦೦ ರೂ.ಗಳ ದರ ನಿಗದಿ ಮಾಡಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ದಿವಾಕರ್, ಟೈಟಸ್ ವರ್ಗೀಸ್ ಮತ್ತಿತರರಿದ್ದರು.