ಕೆ.ಆರ್. ಪುರ,ಜು.೬- ಬೆಂಗಳೂರು ನಗರ ವಿಶ್ವಪ್ರಸಿದ್ಧಿ ಪಡೆಯಲು ಕೆಂಪೇಗೌಡರು ಹಾಕಿರುವ ಅಡಿಪಾಯ ಕಾರಣವಾಗಿದ್ದು, ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನಾವು ಮುಂದುವರೆಸ ಬೇಕಾಗಿದೆ ಎಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿ ಎಸ್.ಬಿ.ಆರ್ ಕಲ್ಯಾಣ ಮಂಟಪದಲ್ಲಿ ಬಿಬಿಎಂಪಿ ವತಿಯಿಂದ ಆಯೋಜಿಸಿದ್ದ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡರು ಹಾಕಿಕೊಟ್ಟಿರುವ ಭದ್ರಬುನಾದಿಯ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ಮಂದುವರೆಸುವುದರ ಜೊತೆಗೆ, ಕೆರೆಗಳ ಸಂರಕ್ಷಣೆ,ಸೇರಿದಂತೆ ಸಾರ್ವಜನಿಕ ಆಸ್ತಿಗಳ ಸಂರಕ್ಷಣಾ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಂಪೇಗೌಡರ ಬಗ್ಗೆ ಅಪಾರವಾದ ಗೌರವವಿದೆ, ಕಳೆದ ೧೫ ವರ್ಷದಲ್ಲಿ ನನ್ನ ಪತಿ ಅರವಿಂದ ಲಿಂಬಾವಳಿ ಅವರು ಮಹದೇವಪುರ ಕ್ಷೇತ್ರವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡೆಸಿದ್ದಾರೆ, ಅವರ ಕೆಲಸಗಳು ನನಗೆ ಪ್ರೇರಣೆಯಾಗಿದ್ದು ಮತ್ತಷ್ಟು ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಿಬಿಎಂಪಿ ಮಹದೇವಪುರ ಜಂಟಿ ಆಯುಕ್ತೆ ಡಾ.ಕೆ. ದಾಕ್ಷಾಯಣಿ ಅವರು ಮಾತನಾಡಿ ಕೆಂಪೇಗೌಡರವರು ಎಲ್ಲಾ ಸಮುದಾಯಕ್ಕೆ ಸೇರಿದ ಆಸ್ತಿ, ಅವರು ಬೆಂಗಳೂರು ನಗರವನ್ನು ಉತ್ತಮ ರೀತಿಯಲ್ಲಿ ನಿರ್ಮಿಸಿದರು, ನಗರದ ಪೇಟೆಗಳು, ಕೆರೆಗಳು, ಗುಡಿಗಳು ಸೇರಿದಂತೆ ಹಲವು ರೀತಿಯಲ್ಲಿ ನಗರ ನಿರ್ಮಾಣ ಮಾಡಿರುವ ಅವರ ಕೊಡುಗೆ ಅಪಾರವಾದದ್ದು ಎಂದು ಹೇಳಿದರು.
ಕಲಾವಿದರಿಂದ ಡೊಳ್ಳು ಕುಣಿತ, ವೀರಗಾಸೆ, ಪಟ್ಟದ ಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ತಂಡದೊಂದಿಗೆ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಮೆರವಣಿಗೆ ಮಾಡಿದ್ದು, ಸಾಧಕರಿಗೆ ಈ ವೇಳೆ ಅಭಿನಂದಿಸಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ನಟರಾಜ್, ಮನೋಹರ್ ರೆಡ್ಡಿ, ಮಾಜಿ ಪಾಲಿಕೆ ಸದಸ್ಯ ಎನ್. ರಮೇಶ್,ಬಿಬಿಎಂಪಿ ಅಧಿಕಾರಿ ಮುನಿರೆಡ್ಡಿ, ಮುಖಂಡರಾದ ಯೋಗನಂದ ಬಾಬು, ನಾಗೊಂಡನಹಳ್ಳಿ ಮಧು, ಲೋಕೇಶ್, ಅಜಿತ್ ಕುಮಾರ್, ಶಿವರಾಮೇಗೌಡ ಇದ್ದರು.