(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.01: ನನ್ನ ಸೋಲಿಗೆ ಕೆಆರ್ ಪಿ ಪಕ್ಷದ ಸ್ಪರ್ಧೆಯೇ ಕಾರಣ. ಜನಾರ್ಧನರೆಡ್ಡಿ ನಮ್ಮನ್ನ ಬೆಳಸಿದ ಜೊತೆಗೆ, ನಮ್ಮನ್ನೇ ಅಡ್ಡ ಇಟ್ಟುಕೊಂಡು. ಅಕ್ರಮವಾಗಿ ಆತ ಬೆಳೆದಿದ್ದು ಪ್ರಪಂಚಕ್ಕೇ ಗೊತ್ತಿದೆಂದು ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಅವರು ಇಂದು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ನ
ಗ್ಯಾರೆಂಟಿ ಗೆಲಿತು, ಅಭಿವೃದ್ಧಿ ಸೋಲ್ತು ಎಂದರು.
ಜನಾರ್ಧನರೆಡ್ಡಿ ಅವರ ಬಗ್ಗೆ ಸಿದ್ದರಾಮಯ್ಯ ಹೇಳ್ತಾರೆ. ಆತ ಮೋಸಗಾರ. ನಮಗೆ ಆತನ ಬೆಂಬಲ ಬೇಡ ಎಂದು. ಆದರೆ ಆತ ಸಿದ್ದರಾಮಯ್ಯ ಸಿಎಂ ಆದರೆ ನನ್ನ ಬೆಂಬಲ ಎನ್ನುತ್ತಾನೆ ಎಂದರೆ ಆರ್ಥ ಆಗುತ್ತೆ. ಏನಾದರಾಗಲಿ ತಾನು ಬೆಳೆಯಬೇಕೆಂಬ ಬುದ್ದಿ. ಸಣ್ಣವನಿದ್ದಾಗಲಿಂದಲೂ ಆ ಬುದ್ದಿ ಇದೆಂದರು.
ಬೆಳೆಸುವುದು ತುಳಿಯೋದ ಆತನ ಬುದ್ದಿ. ನಾನು ಬೆಳಸಿದ ರಣಹೇಡಿಗಳು ಮನೆಯಲ್ಲಿ ಕುಳಿತಿದ್ದಾರೆಂದು ಜನಾರ್ಧನರೆಡ್ಡಿ ಹೇಳಿದ್ದಾರೆ.
ನಮ್ಮನ್ನ ಬೆಳಸಿ, ಅಡ್ಡ ಇಟ್ಟುಕೊಂಡು. ಅಕ್ರಮವಾಗಿ ಆತ ಬೆಳೆದಿದ್ದು ಪ್ರಪಂಚಕ್ಕೇ ಗೊತ್ತಿದೆ. ಯಾರೇ ಆಗಲಿ ಅವನ ಕೆಳಗೇ ಇರಬೇಕು ಎಂಬ ಬುದ್ದಿ ಆತನಲ್ಲದೆ. ಅದನ್ನು ತೋರಿಸಿದ್ದಾನೆ ಅಷ್ಟೇ ಎಂದರು.
ಶ್ರೀರಾಮುಲು ಮತ್ತು ಯಡಿಯೂರಪ್ಪ ಅವರಿಗೆ ಇರುವ ಇಮೇಜ್ ಜನಾರ್ಧನರೆಡ್ಡಿಗೆ ಇಲ್ಲ. ಆತನನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಶ್ನೆ ಇಲ್ಲ ಎಂದರು.
ಪಕ್ಷದ ಕೆಲ ಮುಖಂಡರು ತಮ್ಮದರಲ್ಲಿ ತಾವು ಬ್ಯುಸಿಯಾದ ಕಾರಣ. ನಮ್ಮ ಕ್ಷೇತ್ರದಲ್ಲಿ ಬಂದು ಕೆಲಸ ಮಾಡಲು ಆಗಲಿಲ್ಲ ಎಂದರು.
ನಾವು ಏನೇ ಆದರೂ ಎಲ್ಲರೂ ಒಗ್ಗಟ್ಟಾಗಿ ಮುಂದಿನದನ್ನು ಎದಿರಿಸುತ್ತೇವೆಂದರು.
ಪಾಲಿಕೆ ಸದಸ್ಯರಾದ ಕೋನಂಕಿ ತಿಲಕ್, ಕಲ್ಪನಾ ಕೆ.ಎಸ್.ಅಶೋಕ್ ಕುಮಾರ್ ಪಕ್ಷ ತೊರೆದು ಬೇರೆ ಪಕ್ಷ ಸೇರಿದ್ದಕ್ಕೆ ನೋಟೀಸ್ ನೀಡಿದೆ. ಪಕ್ಷ ತನ್ನದೇ ರೀತಿ ಕ್ರಮ ತೆಗೆದುಕೊಳ್ಳಲಿದೆಂದರು.
ಸಿರುಗುಪ್ಪ ಕ್ಷೇತ್ರದ ಮಾಜಿ ಶಾಸಕ ಸೋಮಲಿಂಗಪ್ಪ ಮಾತನಾಡಿ, ಕೆಆರ್ ಪಿ ಸ್ಪರ್ಧೆ ಸೋಲಿಗೆ ಕಾರಣ ಎನ್ನಲಾಗದು. ಸಹಕಾರ ಕ್ಷೇತ್ರದಲ್ಲಿ ಕೆಲವರು ಅನೈತಿಕ ದಂಧೆಗೆ ಬಿಡದ ಕಾರಣ ನಮ್ಮ ಪಕ್ಷದ ಕೆಲವರು ಒಗ್ಗಟ್ಟಾಗಿ ಕಾಂಗ್ರೆಸ್ ಪರ ನಡೆದರು ಇದು ಸೋಲಿಗೆ ಕಾರ ಆಯ್ತು. ಮಕ್ಕಳ ಮೇಲೆ ಆರೋಪ ಸರಿಯಲ್ಲವೆಂದರು.