ಕೆಆರ್ ಪಿ ಪಕ್ಷದ ಮುಖಂಡರ ಮೇಲೆ ಪ್ರಕರಣ ವಶ.

ಸಿಂಧನೂರು. ಏ.೭ ಚುನಾವಣೆ ಅಧಿಕಾರಿಗಳ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಉದ್ಯೋಗದ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದ ಕೆಆರ್ ಪಿ ಪಕ್ಷದ ಮುಖಂಡರ ಮೇಲೆ ಚುನಾವಣೆ ಅಧಿಕಾರಿಗಳ ತಂಡ ದಾಳಿ ಮಾಡಿ ಪ್ರಕರಣ ದಾಖಲು ಮಾಡಿದೆ.
ನಗರದ ಗಂಗಾವತಿ ರಸ್ತೆಯಲ್ಲಿರುವ ತುಳಸಿ ರೈಸ ಮೀಲ್ ಹತ್ತಿರ ಇರುವ ತುಳಸಿ ಪೂರ್ವಿಕಾ ಗಾರ್ಮಂಟ್ ನಲ್ಲಿ ಕೆಅರ್ ಪಿ ಪಕ್ಷದ ಮುಖಂಡರು ಸಾರ್ವಜನಿಕರಿಗೆ ಉದ್ಯೋಗದ ಗ್ಯಾರಂಟಿ ಕಾರ್ಡ್ ಗಳನ್ನು ನೀಡುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರ ಸಭೆಯ ಎಇಇ.ಮನ್ನೂಸೂರ ಅಲಿ ನೇತೃತ್ವದ ಚುನಾವಣೆಯ ಅಧಿಕಾರಿಗಳ ತಂಡ ದಾಳಿ ಮಾಡಿ ಆಧಾರ ಕಾರ್ಡ ಹಾಗೂ ಚುನಾವಣೆಯ ಗುರುತಿನ ಚೀಟಿ ಮತ್ತು ಉದ್ಯೋಗದ ಗ್ಯಾರಂಟಿ ಕಾರ್ಡುಗಳನ್ನು ವಶಪಡಿಸಿಕೊಂಡು ಪಕ್ಷದ ಯುವ ಮುಖಂಡರಾದ ಅನೀಲ್ ಹಾಗೂ ಹರ್ಷ ಇವರ ಮೇಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಈಗ ಚುನಾವಣೆಯ ನೀತಿ ಸಂಹಿತೆಯ ಜಾರಿಯಲ್ಲಿ ಇರುವದರಿಂದ ಯಾವದೆ ಪಕ್ಷದವರು ಮಾಡುವ ಸಭೆ ಸಮಾರಂಭ ಹಾಗೂ ಬಹಿರಂಗ ಸಾರ್ವಜನಿಕರ ಸಭೆಗಳಿಗೆ ಚುನಾವಣೆ ಅಧಿಕಾರಿಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡುವವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತೇದೆ ಎಂದರು.
ಸಿಂಧನೂರು ಪೋಲೀಸ ಉಪ ವಿಭಾಗದ ವ್ಯಾಪ್ತಿಯಲ್ಲಿ ಸುಮಾರು ೫೪೦ ಜನ ರೌಡಿಗಳಿಗೆ ಗಲಾಟೆ ಮಾಡದಂತೆ ಎಚ್ಚರಿಕೆಯನ್ನು ನೀಡಿ ಅವರಿಂದ ತಹಸೀಲ್ದಾರ ಕಚೇರಿಯಲ್ಲಿ ೫ ಲಕ್ಷದ ಬಾಂಡನ್ನು ಬರೆಸಿಕೊಳ್ಳಲಾಗಿದೆ ೨೦೧೩ ರಿಂದ ಇಲ್ಲಿತನಕ ನಡೆದ ಚುನಾವಣೆಯ ಗಲಾಟೆ ಸಂಬಂಧ ೮೦ ಪ್ರಕರಣಗಳಲ್ಲಿ ಇದ್ದ ೧೨೫ ಜನರಿಂದ ಬಾಂಡ್ ಅಲ್ಲದೆ ಮತೀಯ ಗಲಭೆ ಸಂಬಂಧಿಸಿದಂತೆ ೧೫ ಜನರಿಂದ ಸಹ ಬಾಂಡ್ ಬರೆಸಿಕೊಳ್ಳಲಾಗಿದೆ ತಮ್ಮ ರಕ್ಷಣೆಗಾಗಿ ಲೈಸನ್ಸ್ ಪಡೆದುಕೊಂಡ ಮೆನೆಯಲ್ಲಿಟ್ಟಂತಹ ೮೦ ಆಯುಧಗಳನ್ನು ವಶಪಡಿಸಿಕೊಂಡಿದ್ದು ಚುನಾವಣೆಯ ಮುಗಿದ ನಂತರ ಮರಳಿ ಮಾಲಿಕರಿಗೆ ನೀಡಲಾಗುತ್ತಿದೆ ಎಂದು ಡಿವೈಎಸ್ಪಿ ವೆಂಕಟಪ್ಪ ನಾಯಕ ಪತ್ರಕರ್ತರಿಗೆ ಮಾಹಿತಿಯನ್ನು ನೀಡಿದರು ಸಿಪಿಐ ರವಿಕುಮಾರ ಪಿಎಸ್‌ಐ.ಐ ದುರುಗಪ್ಪ ಇದ್ಧರು.