ಕೆಆರ್ ಪಿ ಪಕ್ಷದ ಅಧಿಕೃತ ಫುಟ್ಬಾಲ್  ಚಿನ್ಹೆ ಬಿಡುಗಡೆ


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.28 : ಮಾಜಿ ಸಚಿವ ಮತ್ತು ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿಯವರು ಬೆಂಗಳೂರಿನ ಪಾರಿಜಾತ ಅಪಾರ್ಟ್‌ಮೆಂಟ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಚುನಾವಣೆ ಆಯೋಗದಿಂದ ಅಧಿಕೃತವಾಗಿ  ಪಕ್ಷಕ್ಕೆ ದೊರೆತ ಫುಟ್ಬಾಲ್ ಚಿನ್ಹೆಯನ್ನು ಮತ್ತು ಪಕ್ಷದ ಪ್ರಣಾಳಿಕೆ ಯನ್ನು ಬಿಡುಗಡೆ ಗೊಳಿಸಿದರು.
ನೂತನವಾಗಿ ಪ್ರಾರಂಭವಾಗಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಹುಟ್ಟು ಹಾಕುವ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಜನಾರ್ಧನ ರೆಡ್ಡಿ ರಾಜಕೀಯ ಆಟ ಶುರು ಮಾಡಿಕೊಂಡಿದ್ದಾರೆ. ಚಿನ್ಹೆ ಬಿಡುಗಡೆ ನಂತರ ಮಾತನಾಡಿ, ಕಳೆದ ಮೂರು ತಿಂಗಳ ಹಿಂದೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ರಾಜ್ಯದಲ್ಲಿ ಉತ್ತಮವಾಗಿ ಜನರು ಬೆಂಬಲಿಸುತ್ತಿದ್ದಾರೆ. ಈಗಾಗಲೇ ಪಕ್ಷದಿಂದ ಹಲವಾರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಘೋಷಣೆ ಮಾಡಲಾಗಿದೆ. ನಮ್ಮ ಪಕ್ಷದಿಂದ ಜನರಿಗೆ ಅವಶ್ಯವಾಗಿ ಬೇಕಾಗಿರುವ ಯೋಜನೆಗಳನ್ನು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ರಾಜ್ಯದಲ್ಲಿ ಪರಿವರ್ತನೆ ಗಾಳಿ ಬೀಸುತ್ತಿದ್ದು, ನಮ್ಮ ನೀರಿಕ್ಷೆಗೂ ಮೀರಿ ಜನರು ಬೆಂಬಲ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಪ್ರಣಾಳಿಕೆಯಲ್ಲಿರುವ ಯೋಜನೆಗಳು: ಬಸವೇಶ್ವರ ರೈತ ಭವರಸೆ ಯೋಜನಡಿ, ಬಸವೇಶ್ವರ ಆರೋಗ್ಯ ಕವಚ ಯೋಜನಡಿ ಉಚಿತ ಚಿಕಿತ್ಸೆ,  ರಾಣಿ ಚೆನ್ನಮ್ಮ ಅಭಯ ಹಸ್ತ ಯೋಜನೆಡಿ ಗೃಹಣಿರಿಯಗೆ ಮಾಸಿಕ ಆರ್ಥಿಕ ನೆರವು, ಹಾಗೂ ಸಾಲಸೌಲಭ್ಯ, ಸಂಗೋಳ್ಳಿ ರಾಯಣ್ಣ ಯುವ ಕಿರಣ ಯುವಕರಿಗೆ ಉದ್ಯೋಗ, ಬಸವೇಶ್ವರ ಗೃಹ ಯೋಜನಡಿ ಮನೆ, ಬಸವೇಶ್ವರ ಶಿಕ್ಷಣ ಸುಧಾರಣೆ, ಬಸವೇಶ್ವರ ಜಲ ಯಜ್ಞ, ಬಸವೇಶ್ವರ ಆಸರೆ ಪಿಂಚಣಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.
ಈ ವೇಳೆ ಕೆ.ಆರ್.ಪಿ ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಿ.ಸಿ ಹೇಮಲತಾ, ಪಾವಗಡ ಅಭ್ಯರ್ಥಿ ನಾಗೇಂದ್ರ ಕುಮಾರ್, ಹಿರಿಯೂರು ಅಭ್ಯರ್ಥಿ ಮಹೇಶ್ ಉಪಸ್ಥಿತಿಯಿದ್ದರು.