(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.05: ಕೆಆರ್ ಪಿ ಪಕ್ಷದ ನಗರ ಕಚೇರಿಯಲ್ಲಿ ಇಂದು 17ನೇ ವಾರ್ಡಿನ ವಿಶಾಲ್ ನಗರ ಬಡಾವಣೆಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರುಗಳಾದ ದಾದಾಪೀರ್, ಸಬಿರಾ ಬೇಗಂ, ಉಮ್ರಾನ್, ಉಮರ್ ಉಲ್ಲಾ, ಅಬ್ದುಲ್, ವಂಡ್ರಿ, ಭಾಷಾ, ಇಮ್ರಾನ್, ಸುರೇಂದ್ರ, ಮಾರೇಶ್ ಮೊದಲಾದ ನೂರಾರು ಕಾರ್ಯಕರ್ತರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ನಗರ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರ ನೇತೃತ್ವದಲ್ಲಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಎಸ್.ಟಿ.ಘಟಕದ ಅಧ್ಯಕ್ಷ ಉಮಾ ರಾಜ್, ಮೆಹಫೂಜ್ ಅಲಿಖಾನ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.