ಕೆಆರ್ ಪಿಪಿ ಪಕ್ಷಕ್ಕೆ ಹಲವರ ಸೇರ್ಪಡೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.06: ನಗರದಲ್ಲಿ ಕೆಆರ್ ಪಿಪಿ ಪಕ್ಷದ  ಕಚೇರಿಯಲ್ಲಿ 15,16 ಮತ್ತು 17ನೇ ವಾರ್ಡಿನ ಕಾರ್ಯಕರ್ತರು ನಗರ ಕ್ಷೇತ್ರದ ನಿಯೋಜಿತ ಅಭ್ಯರ್ಥಿ  ಲಕ್ಷ್ಮಿಅರುಣ ಜನಾರ್ಧನರೆಡ್ಡಿ ರೆಡ್ಡಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದರು.
ಸಾಗರಕುಮಾರ್ ಇವರ ನೇತೃತ್ವದಲ್ಲಿ ಅನೇಕ ಮಹಿಳೆಯರು  ರಾಮು, ಆನಂದ, ಸಲೀಂ,ಕಿಶೋರ್ ನಾಗವೇಣಿ ಸೇರಿದಂತೆ ಅನೆರಕ ಕಾರ್ಯಕರ್ತರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ  ಜಿಲ್ಲಾಧ್ಯಕ್ಷರಾದ ಗೋನಾಳ್ ರಾಜಶೇಖರಗೌಡ, ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ ಸಾಗರಕುಮಾರ್ , ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಹಂಪಿ ರಮಣ, ಎಸ್ ಟಿ ಮೋರ್ಚಾದ  ಗಡ್ಡಂ ತಿಮ್ಮಪ್ಪ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.