
ಬಳ್ಳಾರಿ,ಏ.23- ಬಸವ ಜಯಂತಿ ಪ್ರಯುಕ್ತ ಬಸವೇಶ್ವರ ನಗರದ ಬಸವ ದಳ ಮಂಟಪದ ಕಾರ್ಯಕ್ರಮದಲ್ಲಿ ಭಾಗಿಯಾದ ಕೆಅರ್ ಪಿಪಿ ಅಭ್ಯರ್ಥಿ ಲಕ್ಷ್ಮೀ ಅರುಣ ಅವರು.ಬಸವಣ್ಣನವರ ಐಕ್ಯ ಸ್ಥಳ ಕೂಡಲ ಸಂಗಮದಿಂದ ದರೂರು ಶಾಂತನಗೌಡ ಮತ್ತವರ ತಂಡ ತಂದ ಬಸವ ಜ್ಯೋತಿಯನ್ನು
ಬರಮಾಡಿಕೊಂಡು ಬಸವ ಜ್ಯೋತಿ ಹಿಡಿದು ಯಾತ್ರೆಯಲ್ಲಿ ಪಾಲ್ಗೊಂಡರು. ನಂತರ ಬಸವದಳ ಮಂಟಪದಲ್ಲಿ ಪೂಜಿ ಸಲ್ಲಿಸಲಾಯಿತು
ನಂತರ ಜನಾರ್ದನ ರೆಡ್ಡಿಯವರು ಉಸ್ತುವಾರಿ ಸಚಿವರಾದ ಸಮಯದಲ್ಲಿ ನಗರದಲ್ಲಿ ಸ್ಥಾಪಿಸಿದ ಬಸವೇಶ್ವರರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಗೋನಾಳ್ ರಾಜಶೇಖರ ಗೌಡ, ವೀರಶೈವ ವಿದ್ಯಾಲಯ ಅಧ್ಯಕ್ಷ ದರೂರು ಶಾಂತನಗೌಡ, ಹೆಚ್.ಎಂ. ಕಿರಣ್ ಕುಮಾರ್, ಬಿಸಲಳ್ಳಿ ಬಸವರಾಜ್ ಮೊದಲಾದವರು ಇದ್ದರು .