ಕೆಆರ್ ಪಿಗೆ ಮಂಗಳ ಮುಖಿಯರ ದಂಡು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.26: ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಮಂಗಳ ಮುಖಿಯರ ದಂಡು ಸೇರ್ಪಡೆಗೊಂಡಿದೆ.
ಪಕ್ಷದ ಕಚೇರಿಯಲ್ಲಿ  ಮಹಿಳಾ ಸಂಘಟನೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಪಕ್ಷದ ಸಂಘಟನೆ ಮತ್ತು ಮುಂದಿನ ಕಾರ್ಯಚಟುವಟಿಕೆ ಹಾಗೂ ಚುನಾವಣಾ ರಣತಂತ್ರದ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿಯ ಮಂಗಳಮುಖಿಯರಾದ ಚಾಂದಿನಿ, ಅಂಬಿಕ, ರಾಣಿ, ಮೇಘನ, ಶೋಭಾ, ಈರಮ್ಮ, ಜ್ಯೋತಿ, ಸಂಧ್ಯಾ ಜೊತೆ ನೂರಾರು ಮಂಗಳಮುಖಿಯರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ  ಪಾಲಿಕೆಯ  ಮಾಜಿ ಸದಸ್ಯೆ ಪರ್ವೀನ್ ಬಾನು, ಪೋಲಾ ಲಕ್ಷ್ಮೀ  ಸೇರಿದಂತೆ ಅನೇಕ ಪದಾಧಿಕಾರಿಗಳು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.