ಕೆಆರ್ ಎಸ್ ಪಕ್ಷದಿಂದ ಸ್ವಾಮಿ ವಿವೇಕಾನಂದರ ಭಾವಚಿತ್ರದ ಮೆರವಣಿಗೆ

ದಾವಣಗೆರೆ.ಜ.೧೨: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ‌ ವತಿಯಿಂದ ದಾವಣಗೆರೆಯಲ್ಲಿ ವಿವೇಕಾನಂದ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ‌ಯುವ ಸಮಾವೇಶದ ಪ್ರಯುಕ್ತ ಸ್ವಾಮಿ ವಿವೇಕಾನಂದರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.ನಗರದ ತಾಲ್ಲೂಕು ಕಚೇರಿ ಬಳಿಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಆರಂಭಗೊಂಡ ಮೆರವಣಿಗೆಯು ಪಿ.ಬಿ.ರಸ್ತೆಯಲ್ಲಿ ಸಾಗಿ ಮಹಾತ್ಮ ಗಾಂಧಿ ವೃತ್ತ, ಮಹಾನಗರ ಪಾಲಿಕೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಎವಿಕೆ ಕಾಲೇಜು, ಅಕ್ಕ ಮಹಾದೇವಿ ರಸ್ತೆಯ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಶಾಂತವೇರಿ ಗೋಪಾಲಗೌಡ ವೃತ್ತ, ಸಿ.ಜಿ.ಆಸ್ಪತ್ರೆ ಮುಂಭಾಗದ ರಸ್ತೆಯ ಮೂಲಕ ಶಾಮನೂರು ರಸ್ತೆಯಲ್ಲಿ ಸಾಗಿ ಗುಂಡಿ ಮಹಾದೇವಪ್ಪ ವೃತ್ತದ ಮಾರ್ಗವಾಗಿ ನಗರದ ಮೋತಿ ವೀರಪ್ಪ ಸರ್ಕಾರಿ ಕಾಲೇಜು ಮೈದಾನದವರೆಗೆ ಪಾದಯಾತ್ರೆ ಸಾಗಿತು. ನಂತರ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಮಧ್ಯಾಹ್ನದ ನಂತರ ಯುವ ಸಮಾವೇಶ ನಡೆಯಲಿದೆ‌. ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಸೇರಿದಂತೆ ರಾಜ್ಯದ ಜಿಲ್ಲಾ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆ.