ಕೆಆರ್ ಎಸ್ ಪಕ್ಷದಿಂದ ಅಲ್ಲಿಪುರ ಶ್ರೀನಿವಾಸರೆಡ್ಡಿ ಕಣಕ್ಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಏ,6- ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ಅವರು ಸ್ಥಾಪಿಸಿರುವ ಕರ್ನಾಟಕ ರಾಷ್ಟ್ರೀಯ ಸಮಿತಿ (ಕೆಆರ್ ಎಸ್) ಪಕ್ಷದಿಂದ ಬಳ್ಳಾರಿ ನಗರ ಕ್ಷೇತ್ರದಿಂದ ಅಲ್ಲಿಪುರದ ಶ್ರೀನಿವಾಸ ರೆಡ್ಡಿ ಕಣಕ್ಕಿಳಿಯುತ್ತಿದ್ದಾರೆ.
ರವಿಕೃಷ್ಣಾ ರೆಡ್ಡಿ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದ್ದು ಬಳ್ಳಾರಿ ನಗರಕ್ಕೆ ಸಾಮಾಜಿಕ ಹೋರಾಟಗಾರ ಅಲ್ಲಿಪುರದ ಕೆ. ಶ್ರೀನಿವಾಸ್ ರೆಡ್ಡಿ, ಸಿರುಗುಪ್ಪಾ ಕ್ಷೇತ್ರಕ್ಕೆ ದೊಡ್ಡ ಯಲ್ಲಪ್ಪ,  ಸಂಡೂರು ಕ್ಷೇತ್ರಕ್ಕೆ ವೇಬ ಕುಮಾರಿ ಅವರನ್ನು ತಮ್ಮ ಪಕ್ಷದ ಅಭ್ಯರ್ಥಿಗಳು ಎಂದು ಘೋಷಣೆ ಮಾಡಿದ್ದಾರೆ.