ಕೆಆರ್.ಆಸ್ಪತ್ರೆ, ಚೆಲುವಾಂಬ ವಿರುದ್ಧ ಸುಮೊಟೊ ಕೇಸ್ ದಾಖಲು

ಸಂಜೆವಾಣಿ ನ್ಯೂಸ್
ಮೈಸೂರು: ಜೂ.30:- ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿರುವ ಕೆಆರ್ ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆಗೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಭೇಟಿ ನೀಡಿದ್ದರು. ಆಸ್ಪತ್ರೆಗಳಲ್ಲಿನ ದುರಾಡಳಿತವನ್ನು ಗಮನಿಸಿರುವ ಅವರು ವೈದ್ಯಕೀಯ ಅಧೀಕ್ಷಕರು ಮತ್ತು ವೈದ್ಯಾಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ (ಸುಮೊಟೊ) ಪ್ರಕರಣಗಳನ್ನು ದಾಖಲಿಸಿದ್ದಾರೆ.
ಕಸ ನಿರ್ವಹಣೆ, ಪ್ಲಾಸ್ಟಿಕ್ ಸುರಿಯುವುದು ಮತ್ತು ಪ್ರವೇಶದ್ವಾರದಲ್ಲಿ ವಾಹನಗಳ ಅಡ್ಡಾದಿಡ್ಡಿ ಪಾಕಿರ್‍ಂಗ್, ಗ್ಯಾಂಗ್ರೀನ್ ಮತ್ತು ಸೆಲ್ಯುಲೈಟಿಸ್ ರೋಗಿಗಳ ಬಗ್ಗೆ ಕಾಳಜಿವಹಿಸದಿರುವುದು, ಹೊರರೋಗಿ ವಿಭಾಗದಲ್ಲಿ ರೋಗಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸದಿರುವುದನ್ನು ಉಪ ಲೋಕಾಯುಕ್ತರು ಪಟ್ಟಿದ್ದಾರೆ. ಜುಲೈ 19ರಂದು ಲೋಕಾಯುಕ್ತ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಎರಡೂ ಆಸ್ಪತ್ರೆಗಳ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಸೂಚಿಸಲಾಗಿದೆ. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರು ಸಮಸ್ಯೆಗಳನ್ನು ಪರಿಹರಿಸಿ ಎರಡು ವಾರಗಳಲ್ಲಿ ಉಪ ಲೋಕಾಯುಕ್ತ ಕಚೇರಿಗೆ ಅನುಪಾಲನಾ ವರದಿ ಸಲ್ಲಿಸಬೇಕೆಂದು ಉಪ ಲೋಕಾಯುಕ್ತರು ಆದೇಶಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಲೋಕಾಯುಕ್ತ ತಿಳಿಸಿದೆ. ಎರಡೂ ಆಸ್ಪತ್ರೆಗಳಲ್ಲಿ ಔಷಧಿಗಳನ್ನು ಹೊರಗಿನ ಮೆಡಿಕಲ್ ಸ್ಟೋರ್ಗಳಲ್ಲಿ ಖರೀದಿಸುವಂತೆ ಮತ್ತು ಹತ್ತಿರ ಲ್ಯಾಬ್‍ಗಳಲ್ಲಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ವೈದ್ಯರು ಒತ್ತಾಯಿಸಿದ್ದಾರೆ ಎಂದು ಕೆಲವು ರೋಗಿಗಳು ಉಪ ಲೋಕಾಯುಕ್ತರ ಮುಂದೆ ದೂರಿದ್ದಾರೆ. ವಿಶೇಷಚೇತನ ರೋಗಿಗಳಿಗೆ ವಿಶೇಷವಾದ ವಿಶ್ರಾಂತಿ ಕೊಠಡಿ ಸೌಲಭ್ಯಗಳು ಇಲ್ಲವೆಂಬುದನ್ನೂ ಅವರು ಗಮನಿಸಿದ್ದಾರೆ.
ಉಪ ಲೋಕಾಯುಕ್ತರು ಕೆ.ಆರ್ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳ ಪೆÇಷಕರಿಂದ ಹಣ ಕೇಳುವ ಅಭ್ಯಾಸವನ್ನು ಹೊಂದಿದ್ದಾರೆ ಎಂಬುದು ತಿಳಿದುಬಂದಿದೆ. ರೋಗಿಗಳಿಗೆ ಹಾಸಿಗೆ ನೀಡಿಲ್ಲ. ಕಬ್ಬಿಣದ ಮಂಚಗಳು ತುಕ್ಕು ಹಿಡಿದಿವೆ. ಆಸ್ಪತ್ರೆಯ ಆವರಣಗಳಲ್ಲಿ ಇಲಿ, ಹೆಗ್ಗಣಗಳ ಅನೇಕ ಬಿಲಗಳಿವೆ. ಇದು ಆಸ್ಪತ್ರೆಯ ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ. ಚೆಲುವಾಂಬ ಆಸ್ಪತ್ರೆಯಲ್ಲೂ ವಾರ್ಡ್‍ಗಳ ನಿರ್ವಹಣೆ ಸರಿಯಾಗಿಲ್ಲ. ರೋಗಿಗಳ ಪೆÇಷಕರಿಗೆ ವಸತಿ ನಿಲಯ ಮತ್ತು ಕಾಯುವ ಸ್ಥಳದ ಸೌಲಭ್ಯಗಳಿಲ್ಲ. ವಿಪರೀತ ಶುಲ್ಕ ವಿಧಿಸುವ ಖಾಸಗಿ ಲ್ಯಾಬ್‍ಗಳಿಂದ ಎಂಆರೈ ಮತ್ತು ಅಲ್ಟ್ರಾಸೌಂಡ್ ಪರೀಕ್ಷೆಗಳನ್ನು ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂಬುದನ್ನು ಗಮನಿಸಿದ್ದೇವೆ’’ ಎಂದು ತಿಳಿಸಿದ್ದಾರೆ. ಡಿಎಚ್ ಒ ಕೆ.ಎಚ್.ಪ್ರಸಾದ್, ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ನಂಜುಂಡಸ್ವಾಮಿ, ನಿವಾಸಿ ವೈದ್ಯಾಧಿಕಾರಿ ರಾಜೇಶ್ ಕುಮಾರ್, ಚೆಲುವಾಂಬ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ರಾಜೇಂದ್ರಕುಮಾರ್, ಆರೆಂಒ ಶಿವರಾಮಕೃಷ್ಣ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ’’ ಎಂದು ಲೋಕಯುಕ್ತ ತಿಳಿಸಿದೆ.