ಕೆಆರ್‍ಪಿಪಿ ಪಕ್ಷದ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರಾಗಿ ಸಿರಿಗೇರಿ ಜಿ.ಸಂಪತ್‍ಕುಮಾರ್ ನೇಮಕ”


ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ9. ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಸಂಸ್ಥಾಪಿತ ಕಲ್ಯಾಣ ರಾಜ್ಯ ಪ್ರಗತಿ (ಕೆಆರ್‍ಪಿಪಿ) ಪಕ್ಷದ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ, ಸಿರಿಗೇರಿಯ ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಗೋಡೆ ಸಂಪತ್‍ಕುಮಾರ್‍ಗೌಡ ಇವರನ್ನು ಆಯ್ಕೆ ಮಾಡಲಾಗಿದೆ. ಮಾ.6 ರಂದು ಪಕ್ಷದ ಜಿಲ್ಲಾ ಕಛೇರಿಯಲ್ಲಿ ನಡೆದ ಸಭೆಯಲ್ಲಿ, ಪಕ್ಷದ ಜಿಲ್ಲಾಧ್ಯಕ್ಷ ಗೋನಾಳು ರಾಜಶೇಖರಗೌಡ ಇವರು ಆಯ್ಕೆಯ ಅದೇಶ ಪತ್ರವನ್ನು ನೀಡಿದ್ದಾರೆ. ಪತ್ರದಲ್ಲಿ ನಿಮ್ಮನ್ನು ಕೆಆರ್‍ಪಿಪಿ ಪಕ್ಷದ “ಬಳ್ಳಾರಿ ಜಿಲ್ಲಾ ಘಟಕದ ಉಪಾಧ್ಯಕ್ಷರನ್ನಾಗಿ” ನೇಮಕ ಮಾಡಲಾಗಿದೆ. ತಮಗಿರುವ ಪಕ್ಷದ ಆಡಳಿತದ ಅನುಭವ, ಸಂಘಟನಾ ಶಕ್ತಿಯ ಗುಣಗಳನ್ನು ಗುರುತಿಸಿ ಈ ಜವಾಬ್ದಾರಿ ವಹಿಸಲಾಗಿದೆ. ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ನಿರ್ವಹಿಸಿ ಪಕ್ಷವನ್ನು ಸಂಘಟಿಸಲು ಶ್ರಮಿಸಬೇಕೆಂದು ತಿಳಿಸಲಾಗಿದೆ. ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಜಿ.ಸಂಪತ್‍ಕುಮಾರ್ ಇವರಿಗೆ ಜಿಲ್ಲಾಧ್ಯಕ್ಷ ಗೋನಾಳು ರಾಜಶೇಖರಗೌಡ, ಸಿರಿಗೇರಿ ಮತ್ತು ವ್ಯಾಪ್ತಿಯ ಗ್ರಾಮಗಳ ಹಿತೈಷಿಗಳು, ಕೆ.ಆರ್.ಪಿ.ಪಿ ಪಕ್ಷದ ತಾಲೂಕು ಮುಖಂಡರು ಶುಭ ಕೋರಿದ್ದಾರೆ.
ತಮಗೆ ನೀಡಿರುವ ಜಿಲ್ಲಾ ಉಪಾಧ್ಯಕ್ಷರ ಸ್ಥಾನದ ಕುರಿತು ಸಿರಿಗೇರಿಯ ಸಂಪತ್‍ಗೌಡ ತಮ್ಮ ಅಭಿಪ್ರಾಯ ತಿಳಿಸಿ, ಆಸೆ ಆಮಿಷಗಳಿಗೆ ನಾನು ಕೆಆರ್‍ಪಿಪಿ ಪಕ್ಷಕ್ಕೆ ಸೇರಿಲ್ಲ. ಹಿಂದೆ ಇದ್ದ ಪಕ್ಷದಲ್ಲಿ ನಾನು ಪ್ರಾಮಾಣಿಕವಾಗಿ ತನು,ಮನ,ಧನಗಳನ್ನು ಅರ್ಪಿಸಿ ಸೇವೆ ಮಾಡಿದ್ದೇನೆ. ನನ್ನ ಸೇವೆಯನ್ನು ಆ ಪಕ್ಷದವರು ಗುರುತಿಸಲಿಲ್ಲ, ಗಣನೆಗೆ ತೆಗೆದುಕೊಳ್ಳಲಿಲ್ಲ. ಈ ಹಿಂದೆ ಬಿಜೆಪಿ ಪಕ್ಷವು ಬಳ್ಳಾರಿ ಜಿಲ್ಲೆಯಲ್ಲಿ ನೆಲೆಯೂರಲು ಮಾನ್ಯ ಜನಾರ್ಧನ ರೆಡ್ಡಿಯವರ ಪಾತ್ರ. ಬಳ್ಳಾರಿ ನಗರದ ಅಭಿವೃದ್ಧಿಯಲ್ಲಿ ಅವರ ಕಾರ್ಯವೈಖರಿ, ಮತ್ತು ಪಕ್ಷಕ್ಕಾಗಿ ದುಡಿಯುವವರನ್ನು ಗುರುತಿಸುವ ಅವರ ಮನೋಭಾವ, ಈ ಅಂಶಗಳಿಂದ ನಾನು ಕೆಆರ್‍ಪಿಪಿ ಪಕ್ಷಕ್ಕೆ ಬಂದಿದ್ದೇನೆ. “ಅಭಿವೃದ್ಧಿ ಎಂದರೆ ಜನಾರ್ಧನರೆಡ್ಡಿ, ಜನಾರ್ಧನರೆಡ್ಡಿ ಎಂದರೆ ಅಭಿವೃದ್ಧಿ” ಈ ಘೋಷ ವಾಕ್ಯದಿಂದ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ, ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಹಂತದಲ್ಲಿ ನನ್ನ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ. ನನ್ನ ಹಿಂದಿನ ರಾಜಕೀಯ ಸೇವೆಯನ್ನು ಗುರುತಿಸಿ, ಪಕ್ಷದಲ್ಲಿ ಈ ದೊಡ್ಡ ಸ್ಥಾನವನ್ನು ನನಗೇ ನೀಡಲು ಕಾರಣರಾದ ಜಿಲ್ಲಾಧ್ಯಕ್ಷರಾದ ಗೋನಾಳು ರಾಜಶೇಖರಗೌಡ, ಸಿರುಗುಪ್ಪ ಕ್ಷೇತ್ರ ಅಭ್ಯರ್ಥಿ ಟಿ.ಧರಪ್ಪನಾಯಕ ಮತ್ತು ನನ್ನ ಹಿತೈಷಿಗಳ ಸಹಕಾರವನ್ನು ಮನದಲ್ಲಿಟ್ಟು ಪಕ್ಷಕ್ಕಾಗಿ ದುಡಿಯುತ್ತೇನೆಂದು ತಿಳಿಸಿದರು.