ಕೆಆರ್‌ಎಸ್ ಸುತ್ತ ಯಥಾಸ್ಥಿತಿಗೆ ಸುಮಲತಾ ಆಗ್ರಹ

ಬೆಂಗಳೂರು, ಜು.೨೬- ಕೆಆರ್‌ಎಸ್ ಜಲಾಶಯದ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬಾರದು. ಗಣಿಗಾರಿಕೆ ನಿಷೇಧದ ಯಥಾಸ್ಥಿತಿ ಕಾಪಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗಣಿ ಸಚಿವ ಹಾಲಪ್ಪ ಆಚಾರ್ ಅವರಿಗೆ ಸಂಸದೆ ಸುಮಲತಾ ಅಂಬರೀಷ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರ ಬರೆದಿರುವ ಸುಮಲತಾ ಅಂಬರೀಷ್ ಟ್ರಯಲ್ ಬ್ಲಾಸ್ಟ್ ಆಧರಿಸಿ ಕೆಆರ್‌ಎಸ್ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬೇಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸದ್ಯ ಕೆಆರ್‌ಎಸ್‌ನ ೨೦ ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲಾಗಿದೆ. ಇದನ್ನು ಯಥಾಸ್ಥಿತಿ ಕಾಪಾಡುವಂತೆಯೂ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಟ್ರಂiiಲ್ ಬ್ಲಾಸ್ಟರ್ ಆಧರಿಸಿ ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆಗೆ ಅವಕಾಶ ಕೊಟ್ಟರ ರಿಗ್,ಬೋರ್, ಸೈಲೆಂಟ್ ಬ್ಲಾಸ್ಟ್ ಮಾಡುತ್ತಾರೆ. ಈ ಹಿಂದೆಯೇ ಇಂತಹ ಗಣಿಗಾರಿಕೆಯಿಂದ ಲಘು ಭೂಕಂಪನವಾಗಿತ್ತು ಎಂಬುದನ್ನು ಪತ್ರದಲ್ಲಿ ಹೇಳಿರುವ ಸುಮಲತಾ ಆಂಬರೀಷ್ ಕೆಆರ್‌ಎಸ್ ಸುತ್ತಮುತ್ತಲಿನ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟಿಗೆ ಆಗುತ್ತಿರುವ ಅಪಾಯದ ಬಗ್ಗೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಸಂಶೋಧನಾ ಸಂಸ್ಥೆಗಳು ವರದಿ ನೀಡಿವೆ. ಹಾಗಾಗಿ. ಯಾವುದೇ ಕಾರಣಕ್ಕೂ ಮತ್ತೆ ಗಣಿಗಾರಿಕೆಗೆ ಅವಕಾಶ ಕೊಡಬೇಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.