ಕೆಆರ್‌ಎಸ್ ಪಕ್ಷ ಕಚೇರಿಗಳಿಗೆ ಭೇಟಿ : ಅಧಿಕಾರಿಗಳ ತರಾಟೆಗೆ

ಸಿಂಧನೂರು.ಜು.೨೮- ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನಗರದ ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಸಾರ್ವಜನಿಕ ಕೆಲಸಗಳನ್ನು ಮಾಡಲಾರದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಲಂಚ ಮತ್ತು ಭ್ರಷ್ಟಾಚಾರ, ಮದ್ಯ ನಿಷೇಧ, ಪ್ರಾದೇಶಿಕ ಪ್ರಾಮಾಣಿಕ ಜನಪರ ರಾಜಕರಣಕ್ಕಾಗಿ ಪಕ್ಷದ ವತಿಯಿಂದ ರಾಜ್ಯಾದ್ಯಂತ ಜನ ಚೈತನ್ಯ ಯಾತ್ರೆ ಹಮ್ಮಿಕೊಂಡಿದ್ದು ಇಂದು ಚೈತನ್ಯ ಯಾತ್ರೆ ಸಿಂಧನೂರಿಗೆ ಬಂದು ನಗರಸಭೆ, ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸರಕಾರದ ಸೇವೆಯನ್ನು ಸಾರ್ವಜನಿಕರಿಗೆ ವಿಳಂಬ ಮಾಡದೆ ಒದಗಿಸುವಂತೆ ಆಗ್ರಹಿಸಿದರು.
ಮೊದಳು ನಗರಸಭೆ ಕಚೇರಿಗೆ ಬಂದ ಅಧ್ಯಕ್ಷರು ಪಧಾಧಿಕಾರಿಗಳು ನಗರಸಭೆ ಮುಂದೆ ಹಾಗೂ ಒಳಗಡೆ ಖಾಸಗಿ ವ್ಯಕ್ತಿಗಳು ಡಬ್ಬಿಗಳನ್ನು ಇತ್ತು ವ್ಯವಹಾರ ಮಾಡುತ್ತಿರುವುದನ್ನು ಕಂಡು ಕೆರಳಿದ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣ ರೆಡ್ಡಿ ಸರಕಾರಿ ಕಚೇರಿ ಆವರಣದಲ್ಲಿ ಖಾಸಗಿ ವ್ಯಕ್ತಿಗಳು ಡಬ್ಬಿಗಳನ್ನು ಇಟ್ಟು ವ್ಯವಹಾರ ಅದೆಷ್ಟು ಲಂಚ ತೆಗೆದುಕೊಂಡಿದ್ದೀರಿ ಇವರು ಕಚೇರಿಗೆ ಬರುವ ಬಡ ಜನರಿಗೆ ಹೆಚ್ಚಿನ ಬೆಲೆಗೆ ಅರ್ಜಿಗಳನ್ನು ಫಾರಂ ಗಳನ್ನು ನೀಡುತ್ತಿದ್ದು ಕೂಡಲೇ ಈ ಡಬ್ಬಾಅಂಗಡಿಗಳನ್ನು ತೆಗೆಸುವಂತೆ ಪರಿಸರ ಅಭಿಯಂತರ ಮಹೇಶ್ವರ ಅವರಿಗೆ ತರಾಟೆಗೆ ತೆಗೆದುಕೊಂಡಾಗ ಅಧಿಕಾರಿ ಸಾರ್ವಜನಿಕರ ಮುಂದೆ ತೀವ್ರ ಮುಜುಗರ ಅನುಭವಿಸಿ ಡಬ್ಬಾ ಅಂಗಡಿಗಳನ್ನು ತೆಗೆಯುವುದಾಗಿ ಅಧಿಕಾರಿ ಮಹೇಶ್ವರ ಮಾತು ಕೊಟ್ಟರು.
ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ತಂಡ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ರೋಗಿಗಳಿಗೆ ತಿಳಿಯುವಂತೆ ನಾಮಫಲಕದಲ್ಲಿ ಹಾಕಬೇಕು.ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡಿ ಹೊಂದು ವೇಳೆ ನಿಮ್ಮಲ್ಲಿ ಚಿಕಿತ್ಸೆ ಲಭ್ಯವಿಲ್ಲದ್ದಿದ್ದಲ್ಲಿ ಹತ್ತಿರದ ಸರಕಾರಿ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಿ ಆದರೆ ಖಾಸಗಿ ಆಸ್ಪತ್ರೆಗೆ ಕಳುಹಿಸಬೇಡಿ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ನಾಗರಾಜ ಕಾಟ್ವಾ ಗೆ ರವಿಕೃಷ್ಣ ರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡ ರಾದ ನಿರುಪಾದಿ ಗೊಮರ್ಶಿ, ವೆಂಕಟೇಶ ಮಸ್ಕಿ, ಮಲ್ಲಯ್ಯಸ್ವಾಮಿ,
ನಾಗರಾಜ ,ಶರಣಪ್ಪ ಗೊರೆಬಾಳ,ಪರುಶುರಾಮ ಸೇರಿದಂತೆ ಇತರರು ಇದ್ದರು.