
ಕಲಬುರಗಿ,ಫೆ 25: ನಗರ ಸ್ಥಳೀಯ ಸಂಸ್ಥೆಗಳಾದ ಜೆಸ್ಕಾಂ, ಪಿಡಬ್ಲ್ಯುಡಿ, ಜಿಪಂ, ನೀರು ಸರಬರಾಜು ಮಂಡಳಿ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಪ್ರಾಯೋಜಕತ್ವದಲ್ಲಿ ಕೆಆರ್‍ಇಡಿಎಲ್‍ವತಿಯಿಂದ ಒಂದು ದಿನದ ಡಿಮ್ಯಾಂಡ್ ಸೈಡ್ ಮ್ಯಾನೇಜ್‍ಮೆಂಟ್ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಶುಕ್ರವಾರ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಾಗಾರವನ್ನು ಜೆಸ್ಕಾಂ ಮುಖ್ಯ ಎಂಜಿನಿಯರ್ ಆರ್.ಡಿ.ಚಂದ್ರಶೇಖರ್ ಅವರು ಉದ್ಘಾಟಿಸಿದರು.ಎನರ್ಜಿ ಆಡಿಟರ್ ಅನಿಲಕುಮಾರ್ ನಾಡಿಗೇರ ಮೈಸೂರು ಹಾಗೂ ಎನರ್ಜಿ ಕನ್ಸಲ್ಟಂಟ್ ವೆಂಕೊಬರಾವ್ ಮೈಸೂರು ಇವರು ಡಿಮ್ಯಾಂಡ್ ಸೈಡ್ ಮ್ಯಾನೇಜ್‍ಮೆಂಟ್ ಕಾರ್ಯಾಗಾರದ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕೆಆರ್‍ಇಡಿಎಲ್ ತಾಂತ್ರಿಕ ಅಧಿಕಾರಿ ಮಾಲಿನಿ ಸ್ವಾಮಿ ,ಸಮಾಜ ಸೇವಕಿ ಮಾಲಾ ದಣ್ಣೂರ್ ಮತ್ತು ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಗೂ ಕೆಆರ್‍ಇಡಿಎಲ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬಿಇಇ ಯ ಮಾರ್ಗಸೂಚಿಗಳ ಪ್ರಕಾರ ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ ದೃಷ್ಟಿಯಿಂದ ಕಾರ್ಯಾಗಾರವನ್ನು ನಡೆಸಲಾಯಿತು.