ಕೆಆರ್‍ಇಡಿಎಲ್‍ನಿಂದ ಕಾರ್ಯಾಗಾರ


ಬಳ್ಳಾರಿ,ಫೆ.28: ನಗರದ ಸ್ಥಳೀಯ ಸಂಸ್ಥೆಗಳಾದ ಜೆಸ್ಕಾಂ, ಲೋಕೋಪಯೋಗಿ ಇಲಾಖೆ, ಜಿಪಂ, ನೀರು ಸರಬರಾಜು ಮಂಡಳಿ, ಮಹಾನಗರ ಪಾಲಿಕೆ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ನವದೆಹಲಿಯ ಬ್ಯೂರೋ ಆಫ್ ಎನರ್ಜಿ ಎಫಿಸಿಯನ್ಸಿ ರವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆಆರ್‍ಇಡಿಎಲ್) ವತಿಯಿಂದ ಒಂದು ದಿನದ ಡಿಮ್ಯಾಂಡ್ ಸೈಡ್ ಮ್ಯಾನೇಜ್‍ಮೆಂಟ್ ಕಾರ್ಯಾಗಾರವನ್ನು ಇತ್ತೀಚೆಗೆ ನಗರದ ರಾಯಲ್ ಫೋರ್ಟ್ ಹೋಟೆಲ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಗಾರವನ್ನು ಬಳ್ಳಾರಿ ಜೆಸ್ಕಾಂನ ಮುಖ್ಯ ಇಂಜಿನಿಯರ್ ಲಕ್ಷ್ಮಣ್ ಚವಾಣ್ ಅವರು ಉದ್ಘಾಟಿಸಿದರು. ಮೈಸೂರಿನ ಎನರ್ಜಿ ಆಡಿಟರ್ ಹಾಗೂ ಎನರ್ಜಿ ಮ್ಯಾನೇಜ್‍ಮೆಂಟ್ ಇಂಜಿನಿಯರ್ ಅನಿಲ್‍ಕುಮಾರ್ ನಾಡಿಗೇರ ಮತ್ತು ವೆಂಕೊಬರಾವ್ ಅವರು ಕಾರ್ಯಾಗಾರದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಬಿಇಇಯ ಮಾರ್ಗಸೂಚಿಗಳ ಅನುಸಾರ ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆ ದೃಷ್ಟಿಯಿಂದ ಕಾರ್ಯಗಾರವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕೆಆರ್‍ಇಡಿಎಲ್ ಪ್ರಾದೇಶಿಕ ಕಚೇರಿಯ ತಾಂತ್ರಿಕ ಅಧಿಕಾರಿ ಮಾಲಿನಿ ಸ್ವಾಮಿ, ಎಇಇ ಸಮಾಜ ಸೇವಕಿ ಮಾಲಾ ದನ್ನುರ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಕಲಬುರಗಿಯ ಕೆಆರ್‍ಇಡಿಎಲ್‍ನ ಸಿಬ್ಬಂದಿಗಳು ಉಪಸ್ಥಿತರಿದ್ದರು.