ಕೆಅರ್ ಪಿ ಪಕ್ಷ ಸೇರ್ಪಡೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.24: ನಗರದ ಗುಗ್ಗರಹಟ್ಚಿಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಮುಖಂಡ
ಮುನ್ನಾಭಾಯಿ ಇವರ ನೇತೃತ್ವದಲ್ಲಿ, ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣ ಅವರ ಸಮ್ಮುಖದಲ್ಲಿ ವಕೀಲ  ರಾಮಾಂಜಿನಿ ಸೇರಿದಂತೆ ಅನೇಕ ಜನರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡ ಮೆಹಪೂಜ್ ಅಲಿಖಾನ್,  ಪರಿಶಿಷ್ಟ ಪಂಗಡ ಅಧ್ಯಕ್ಷ ಉಮಾರಾಜ್  ಸೇರಿದಂತೆ ಅನೇಕ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.