ಕೆಂಭಾವಿ:ಜೂ.18: ಕೆಂಭಾವಿ ಪಟ್ಟಣದಲ್ಲಿ ಪತ್ರಿಕಾ ಭವನ ನಿಮಾಣ ಮಾಡುವಂತೆ ಒತ್ತಾಯಿಸಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘ ಸುರಪುರ ತಾಲೂಕಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ಪತ್ರಕರ್ತರ ಮನವಿಗೆ ತಕ್ಷಣವೆ ಸ್ಪಂದಿಸಿದ ಸಚಿವರು, ಪುರಸಭೆ ವ್ಯಾಪ್ತಿಯ ಅಧಿಕೃತ ಜಾಗದಲ್ಲಿ ಭವನಕ್ಕೆ ಶೀಘ್ರವೆ ನಿವೇಶನ ಒದಗಿಸಲು ಅಗತ್ಯ ದಾಖಲಾತಿಗಳನ್ನು ತಯಾರು ಮಡುವಂತೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಭವನ ನಿರ್ಮಾಣಕ್ಕೆ ಬೇಕಾದ ಅಗತ್ಯ ಅನುದಾನ ಒದಗಿಸಿ ಭವ್ಯ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ಪತ್ರಕರ್ತರಿಗೆ ಉಚಿತ ನಿವೇಶನ ನೀಡುವ ಕುರಿತಾದ ಮನವಿಗೆ ಪ್ರತಿಕ್ರಿಯೆ ನೀಡಿದ ಅವರು ಈಗಾಗಲೆ ಶಹಾಪೂರದಲ್ಲಿ ಪತ್ರಕರ್ತರಿಗೆ ನಿವೇಶನ ಮಂಜೂರಾಗಿದ್ದು ಇಲ್ಲಿ ನಿವೇಶನ ನೀಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಕಾನಿಪ ಜಿಲ್ಲಾ ಉಪಾಧ್ಯಕ್ಷ ಗುಂಡಭಟ್ಟ ಜೋಷಿ, ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ, ಪತ್ರಕರ್ತರಾದ ವಿಜಯಾಚಾರ್ಯ ಪುರೋಹಿತ, ಪವನ ಕುಲಕರ್ಣಿ, ಡಿ. ಸಿ. ಪಾಟೀಲ, ವೀರೇಶರೆಡ್ಡಿ ಯಾಳಗಿ, ಹಳ್ಳೇರಾವ ಕುಲಕರ್ಣಿ, ಬಸನಗೌಡ ಪಾಟೀಲ, ರವಿರಾಜ ಕಂದಳ್ಳಿ, ವೀರೇಶ ಭಜಂತ್ರಿ, ಗುರುರಾಜ ಕುಲಕರ್ಣಿ, ಗಿರೀಶ ಬ್ಯಾಕೋಡ, ರೇವಣಸಿದ್ದಯ್ಯ ಮಠ, ವೀರಣ್ಣ ಕಲಕೇರಿ, ಡಾ. ಯಂಕನಗೌಡ ಇದ್ದರು.