ಕೆಂಭಾವಿ ಪಟ್ಟಣದಿಂದ ದಾವಣಗೆರೆ, ಕಲಬುರಗಿಗೆ ಪ್ರತ್ಯೇಕ ನೂತನ ಬಸ್ ಆರಂಭ

ಕೆಂಭಾವಿ : ನ.13:ಪಟ್ಟಣದಿಂದ ದಾವಣಗೆರೆ ಮತ್ತು ಕಲಬುರಗಿಗೆ ನಗರಗಳಿಗೆ ತೆರಳುವ ಪ್ರಯಾಣಿಕರ ಬೇಡಿಕೆಯಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರತ್ಯೇಕವಾಗಿ 2 ನೂತನ ಬಸ್‍ಗಳನ್ನು ಆರಂಭಿಸಿದೆ.

ಕಲಬುರಗಿ ಕೆಂಭಾವಿ ನಡುವೆ ಓಡಾಡುವ ನೂತನ ಬಸ್ ಬೆಳಿಗ್ಗೆ 4.30ಕ್ಕೆ ಜಿಲ್ಲಾ ಕೇಂದ್ರ ಯಾದಗಿರಿಯಿಂದ ಶಹಾಪುರ ಮಾರ್ಗವಾಗಿ ಬೆಳಿಗ್ಗೆ 6.30ಕ್ಕೆ ಕೆಂಭಾವಿಗೆ ಬರಲಿದೆ. ಅಲ್ಲಿಂದ 6.45ಕ್ಕೆ ಕೆಂಭಾವಿ ಬಿಟ್ಟು ಭೀಮರಾಯನಗುಡಿ ಮಾರ್ಗವಾಗಿ ಕಲಬುರಗಿಗೆ ತಲುಪಲಿದೆ.

ಇನ್ನು ಹೊಸಪೇಟೆ ವಿಭಾಗದ ಹರಪ್ಪನಹಳ್ಳಿ ಘಟಕವು ದಾವಣಗೆರೆ -ಕೆಂಭಾವಿ ಪಟ್ಟಣಕ್ಕೆ ಬಸ್ ಪ್ರಾರಂಭಿಸಿದೆ. ಈ ಬಸ್ ಬೆಳಿಗ್ಗೆ 6.15ಕ್ಕೆ ಕೆಂಭಾವಿಯಿಂದ ಹುಣಸಗಿ, ತಾಳಿಕೋಟಿ,ಮುದ್ದೇಬಿಹಾಳ ಹಾಗೂ ಇಲಕಲ್, ಕುಷ್ಟುಗಿ,ಹೋಸಪೇಟ ಮಾರ್ಗವಾಗಿ ದಾವಣಗೆರೆಗೆ ಹೋಗಲಿದೆ. ಕೆಂಭಾವಿಗೆ ಬಂದು ವಸತಿ ಮಾಡಲಿದೆ.

ಪ್ರಯಾಣಿಕರು ಇವುಗಳ ಸದುಪಯೋಗಪಡಿಸಿಕೊಳ್ಳಲು ಪ್ರಕಟಣೆ ಕೋರಿದೆ.

ನಾಗರೀಕರ ಹರ್ಷ : ಕೆಂಭಾವಿ ಪಟ್ಟಣದಿಂದ ನೂತನವಾಗಿ 2 ಬಸ್ ಗಳನ್ನು ಆರಂಭಿಸಿದಕ್ಕೆ ಪಟ್ಟಣದ ನಾಗರೀಕರು, ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಂಜೀವರಾವ ಕುಲಕರ್ಣಿ ಹಾಗೂ ವಿರೇಶ ಭಜಂತ್ರಿ, ಬಾಬಾ ನುರುಲ್ಲಖಾನ್ ಅವರು ವ್ಯವಸ್ಥಾಪಕ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.