ಕೆಂಭಾವಿಹಿರೇಮಠರಿಗೆ ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿ

ಇಲಕಲ್:ಫೆ.20:ಕೆಂಭಾವಿಹಿರೇಮಠ ಅವರಿಗೆ ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿ ಪತ್ರಿಕಾ ರಂಗ ಹಾಗೂ ಸಮಾಜಸೇವೆ ಗುರುತಿಸಿ ಇಲಕಲ್ ನಗರದ ಪತ್ರಿಕಾ ಮಿತ್ರರಾದ ಶಿವಕುಮಾರ್ ಕೆಂಭಾವಿಹಿರೇಮಠ ಅವರಿಗೆ ರಾಯಚೂರ ನಗರದಲ್ಲಿ “ಬೆಳಕು ಸಾಹಿತ್ಯ ಸಂಸ್ಕøತಿಕ ಹಾಗೂ ಶೈಕ್ಷಣಿಕ ಟ್ರಸ್ಟ್ (ರಿ)” ವತಿಯಿಂದ ಕೊಡುವ ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿಯನ್ನು ರವಿವಾರ ದಿನ 18.2.2024 ರಂದು ಇಲಕಲ್ ನಗರದಲ್ಲಿ ಅವರು ಸಲ್ಲಿಸಿದ ” ಪತ್ರಿಕಾ ರಂಗ ಹಾಗೂ ಸಮಾಜ ಸೇವೆ ” ಗುರುತಿಸಿ ಅವರಿಗೆ ಬೆಳಕು ಅಂತರ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು ಸ್ಥಳ: “ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ರಾಯಚೂರ” ಈ ಪ್ರಶಸ್ತಿಯನ್ನು ಸಾವಿರಾರು ಜನ ಪ್ರೇಕ್ಷಕರ ಸಮ್ಮುಖದಲ್ಲಿ ಬೆಳಕು ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಅಣ್ಣಪ್ಪ ಮೇಟಿಗೌಡರ ಹಾಗೂ ಬೆಳಕು ಸಮ್ಮೇಳನದ ಅಧ್ಯಕ್ಷರಾದ ದೇವೇಂದ್ರಮ್ಮ ಅವರು ನೀಡಿ ಸತ್ಕರಿಸಿ ಅಭಿನಂದಿಸಿದ್ದಾರೆ.