ಕೆಂಪೇಗೌಡ ಸ್ಮರಣೋತ್ಸವ ಸಮಿತಿಯಿಂದ ಸದಸ್ಯರಿಂದ ಶಿಲ್ಪಾ ನಾಗ್ ಬೆಂಬಲ

ಮೈಸೂರು, ಜೂ.4: ಮೈಸೂರು ನಗರ ಪಾಲಿಕೆಯ ದಕ್ಷ ಆಯುಕ್ತರಾದ ಐಎಎಸ್ ಅಧಿಕಾರಿ ಶಿಲ್ಪಾ ನಾಗ್ ರವರ ರಾಜೀನಾಮೆ ವಿಷಯ ತುಂಬಾ ಬೇಸರ ಮತ್ತು ಆಶ್ವರ್ಯವಾಗಿದೆ ಎಂದು ಕೆಂಪೇಗೌಡ ಸ್ಮರಣೋತ್ಸವ ಸಮಿತಿಯ ಸದಸ್ಯರು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಅವರುಗಳು ಮೈಸೂರು ನಗರದಲ್ಲಿ ವಾರ್ ರೂಂ ನಂಬರ್ ಜನರಿಗೆ ಸಿಗದ ಸಂದರ್ಭದಲ್ಲಿ ಕೋವಿಡ್ ಮಿತ್ರ ತೆರೆದು ದೇಶಕ್ಕೆ ಆಡಳಿತ ಮಾರ್ಗ ಶಿಲ್ಪಾ ನಾಗ್ ಅವರು ನಗರ ಬಡಾವಣೆಗೆ ಮನೆಮನೆಗಳ ಸಮೀಕ್ಷೆ, ಸೋಂಕು ನಿಯಂತ್ರಣಕ್ಕೆ ಹಲವಾರು ಯೋಜನೆ ಜಾರಿಗೆ ತಂದಿದ್ದರು. ಇವರ ರಾಜೀನಾಮೆ ಅಂಗೀಕಾರವಾಗದ ಹಾಗೆ ಸರ್ಕಾರಕ್ಕೆ ಮನವಿ ಮಾಡಿ ಜಿಲ್ಲಾ ಅಧಿಕಾರಿ ರೋಹಿಣಿ ಸಿಂಧೂರಿ ಯವರನ್ನು ಮೈಸೂರಿನಿಂದ ವರ್ಗಾವಣೆಗೊಳಿಸಬೇಕು ಎಂದರು. ಸಮಿತಿಯ ಎಲ್ಲಾ ಸದಸ್ಯರು ಪಾಲಿಕೆ ಮುಂಭಾಗಕ್ಕೆ ಬಂದು ಶಿಲ್ಪಾ ನಾಗ್ ಅವರೊಂದಿಗೆ ನಾವಿದ್ದೇವೆ ಎಂದು ಬೆಂಬಲಿಸಿದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಶಿವಕುಮಾರ್,ಉಪಾಧ್ಯಕ್ಷ ರವಿ ರಾಜಕೀಯ,ಕಾರ್ಯದರ್ಶಿ ಹೇಮಾ ನಂದೀಶ್,ಕುಮಾರ್ ಗೌಡ,ಪಾಲಕ್ಷ,ರಘು ರಾಮ್ .ಉಮೇಶ್ ಗೀತಾ ಪುಟ್ಟಸ್ವಾಮಿ ಉಪಸ್ಥಿತಿಯಲ್ಲಿದ್ದರು.