ಕೆಂಪೇಗೌಡ ರಥಕ್ಕೆ ಅದ್ದೂರಿ ಸ್ವಾಗತ

ಆನೇಕಲ್. ನ. ೫ – ದೇವನಹಳ್ಳಿಯ ಕೆಂಪೇಗೌಡ ಅಂತರ್ ರಾಷ್ಠೀಯ ವಿಮಾನ ನಿಲ್ದಾಣ ಬಳಿಯಲ್ಲಿ ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿರವರು ನ. ೧೧ ರಂದು ಅನಾವರಣ ಮಾಡಲಿದ್ದು ಅದರ ಪ್ರಯುಕ್ತವಾಗಿ ರಾಜ್ಯಾದ್ಯಂತ ಮಣ್ಣು (ಮೃತ್ತಿಕೆ) ಸಂಗ್ರಹ ಕಾರ್ಯ ಅಭಿಯಾನ ನಡೆಯುತ್ತಿದ್ದು, ಇಂದು ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿಯ ಮರುಸೂರು ಗೇಟ್ ಗೆ ನಾಡಪ್ರಭು ಕೆಂಪೇಗೌಡರ ರಥ ಬರುತ್ತಿದ್ದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗಣ್ಯರು ಹಾಗೂ ಗ್ರಾಮಸ್ಥರು ರಥಕ್ಕೆ ಪುಷ್ಪ ನಮನ ಸಲ್ಲಿಸುವ ಮುಖೇನ ಭವ್ಯ ಸ್ವಾಗತ ಕೋರಿದರು.
ಇದೇ ಸಂಧರ್ಭದಲ್ಲಿ ಮಹಿಳೆಯರು ತಲೆ ಮೇಲೆ ಪೂರ್ಣ ಕುಂಭ ಕಳಸ ಹೊತ್ತು ನಾಡಪ್ರಭು ಕೆಂಪೇಗೌಡರ ರಥದ ಜೊತೆಗೆ ಮೆರವಣಿಗೆ ನಡೆಸಿದರು ಹಾಗೆಯೇ ತಮಟೆ ವಾದ್ಯ, ವೀರಗಾಸೆ, ಡೊಳ್ಳು ಕುಣಿತ ದೊಂದಿಗೆ ಮರಸೂರು ಗ್ರಾಮ ಪಂಚಾಯತಿ ಸದಸ್ಯರು. ಗ್ರಾಮಸ್ಥರು ಮತ್ತು ಕುಲಬಾಂದವರು ಕೆಂಪೇಗೌಡರ ರಥದ ಜೊತೆಗೆ ಸಾಗಿದ ದೃಶ್ಯಗಳು ಕಂಡು ಬಂತು. ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ ಸೋಮಶೇಖರ್ ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್,ಆರ್.ರಮೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಬಂಡಾಪುರ ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಮಕೃಷ್ಣಾರೆಡ್ಡಿ, ಮರಸೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣಪ್ಪ, ಪಿಡಿಓ ಮುರಳಿ. ಮರಸೂರು ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರಾದ ಯಂಗಾರೆಡ್ಡಿ, ನಾಗನಾಯಕನಹಳ್ಳಿ ರಾದಾಕೃಷ್ಣ, ಶ್ರೀನಿವಾಸ್ ರೆಡ್ಡಿ, ನಾಯನಹಳ್ಳಿ ಮುನಿರಾಜುಗೌಡ, ದೊಡ್ಡಹಾಗಡೆ ಶಂಕರ್, ಸರಿತಾ ವೆಂಕಟಸ್ವಾಮಿ. ಅನಿಲ್ ರೆಡ್ಡಿ, ಮಡಿವಾಳ ಮಣಿಕಂಠ, ಸುರೇಶ್ ರೆಡ್ಡಿ, ರಮೇಶ್, ಮುರಳಿ, ಸದಾನಂದರೆಡ್ಡಿ ಮತ್ತಿತರು ಹಾಜರಿದ್ದರು.