ಕೆಂಪೇಗೌಡ ಜಯಂತಿ ಆಚರಣೆ-ಚರ್ಚೆ

ಕನಕಪುರ, ಜು. ೨೦: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹೊಸದುರ್ಗ ಗ್ರಾಮದಲ್ಲಿ ಹೊಸದುರ್ಗ ಜಿಲ್ಲಾ ಪಂಚಾಯಿತಿ ಮಟ್ಟಡ ಸಭೆಯನ್ನು ನಡೆಸಿ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಆಚರಣೆ ಕುರಿತು ಚರ್ಚೆ ನಡೆಸಲಾಯಿತು.
ಸಭೆಗೆ ಹೊಸದುರ್ಗ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಪ್ರಮುಖ ಒಕ್ಕಲಿಗ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಕೆಂಪೇಗೌಡ ಜಯಂತಿ ಆಚರಣೆ ಕುರಿತು ಸಲಹೆ ಸೂಚನೆಗಳನ್ನು ನೀಡಿದರು, ಕಾರ್ಯಕ್ರಮಕ್ಕೆ ತಮ್ಮ ತನು, ಮನ, ಧನವನ್ನು ಅರ್ಪಿಸಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುವುದಾಗಿ ತಿಳಿಸಿದರು.
ಕಾರ್ಯಕ್ರಮಕ್ಕೆ ಪ್ರತಿ ಗ್ರಾಮಗಳಿಂದ ಜನರನ್ನು ಕರೆತರುವ ಜವಬ್ದಾರಿಯನ್ನು ಮುಖಂಡರು ವಹಿಸಿಕೊಂಡರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೆರವಣಿಗೆಗಳನ್ನು ಸಿದ್ದಪಡಿಸಿಕೊಂಡು ಕಲಾ ತಂಡದೊಂದಿಗೆ ಕನಕಪುರಕ್ಕೆ ಬರುವುದಾಗಿ ಹೇಳಿದರು.
ಕೆಂಪೇಗೌಡ ಜಯಂತೋತ್ಸವ ಸಮಿತಿ ಸದಸ್ಯರು, ಸಮುದಾಯದ ಪ್ರಮುಖ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದು ಜುಲೈ ೨೪ ರಂದು ನಡೆಯುವ ಕಾರ್ಯಕ್ರಮದ ರೂಪು ರೇಸುಗಳ ಬಗ್ಗೆ ತಿಳಿಸಿಕೊಟ್ಟು ಇದು ನಮ್ಮೆಲ್ಲರ ಹೆಮ್ಮೆಯ ಕಾರ್ಯಕ್ರಮವಾಗಿದ್ದು ಎಲ್ಲರೂ ಸ್ವಯಂ ಪ್ರೇರಣೆಯಿಂದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.