ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಅನಾವರಣ ನಮ್ಮ ಹೆಮ್ಮೆಯ ಪ್ರತೀಕ

ಕೆ.ಆರ್.ಪೇಟೆ. ನ.03:- ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಅನಾವರಣ ಮಾಡುತ್ತಿರುವುದು ನಮ್ಮ ಹೆಮ್ಮೆಯ ಪ್ರತೀಕವಾಗಿದೆ ಎಂದು ತಹಶೀಲ್ದಾರ್ ಎಂ.ವಿ.ರೂಪ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿಗೆ ಆಗಮಿಸಿದ ಮೃತ್ತಿಕೆ ಸಂಗ್ರಹದ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ನಾಡಪ್ರಭುವಿಗೆ ನೀಡುತ್ತಿರುವ ವಿಶೇಷ ಗೌರವ ಇದಾಗಿದ್ದು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ದೂರದೃಷ್ಟಿಯ ಕಲ್ಪನೆಗಳು ಎಲ್ಲಾ ಕಾಲಕ್ಕೂ ಎಲ್ಲರಿಗೂ ಅಗತ್ಯವಾದ ಚಿಂತನೆಗಳಾಗಿರುವ ದೃಷ್ಟಿಯಿಂದ ಈ ಪ್ರತಿಮೆ ನಿರ್ಮಾಣಕ್ಕೆ ಎಲ್ಲಾ ಹಳ್ಳಿಗಳಿಂದ ಪವಿತ್ರವಾದ ಮೃತ್ತಿಕೆಯನ್ನು ಸಂಗ್ರಹಿಸಲಾಗುತ್ತಿದೆ. ನಮ್ಮ ಕೆಆರ್ ಪೇಟೆ ಪುರಸಭಾ ವ್ಯಾಪ್ತಿಯ ಹೊಸ ಬಳಲು ಗ್ರಾಮದ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವಾಲಯ ಪಟ್ಟಣದ ಈಶ್ವರ ದೇವಾಲಯ ಸೇರಿದಂತೆ ತಾಲೂಕಿನ ಪ್ರಮುಖ ಪವಿತ್ರ ಸ್ಥಳಗಳ ಹಾಗೂ ಹಳ್ಳಿಗಳ ಮೃತ್ಯುಕ್ಕೆಯನ್ನು ಸಂಗ್ರಹಿಸಿ ನೀಡಲಾಗುತ್ತಿದೆ ನಮ್ಮ ಕೆಂಪೇಗೌಡ ನಮ್ಮ ಹೆಮ್ಮೆ ಎಂಬಂತೆ ನಗರ ಯೋಜನೆಯ ಪರಿಕಲ್ಪನೆಯನ್ನು ಬಹಳ ಹಿಂದಿನಿಂದಲೇ ಹಾಕಿಕೊಟ್ಟ ನಾಡಪ್ರಭು ಕೆಂಪೇಗೌಡ ಅವರ ಮೃತ್ಕೆ ವಿಗ್ರಹ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಇಓ ಸತೀಶ್, ಟಿಹೆಚ್‍ಓ ಢಾ.ಮಧುಸೂಧನ್, ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ನರೇಗ ಎಡಿ ಡಾ.ನರಸಿಂಹರಾಜು, ಬಿಜೆಪಿ ಮುಖಂಡ ಬಸವೇಗೌಡ, ಕರವೇ ಡಿ.ಎಸ್.ವೇಣು, ಪ್ರೆಸ್ ಕುಮಾರ್, ಸಚಿವರ ಆಪ್ತ ಸಹಾಐಕ ದಯಾನಂದ್, ಉಪತಹಶೀಲ್ದಾರ್ ಲಕ್ಷ್ಮಿಕಾಂತ್, ಪಟ್ಟಣ ಠಾಣೆಯ ಪಿಎಸ್‍ಐ ಸುನಿಲ್, ಪುರಸಭಾ ಅಧಿಕಾರಿಗಳು, ಡಿ.ಪಿ.ಪರಮೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.