ಕೆಂಪೇಗೌಡರ ರಥಯಾತ್ರೆಗೆ ಮಂಜುನಾಥಗೌಡ ವಿಜಯ್‌ಕುಮಾರ್ ಬೆಂಬಲಿಗರ ನಡುವೆ ವಾಗ್ವಾದ

ಮಾಲೂರುನ,೫- ರಾಜ್ಯ ಸರ್ಕಾರ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಿರುವ ಸ್ಥಳದಲ್ಲಿ ಟೀಮ್ ಪಾರ್ಕ್ ನಿರ್ಮಾಣಕ್ಕೆ ಮಣ್ಣು ಸಂಗ್ರಹ ಮಾಡಲು ಕೆಂಪೇಗೌಡ ರಥ ಯಾತ್ರೆ ತಾಲ್ಲೂಕಿನ ಟೀಕೆಲ್ ಹೋಬಳಿಯ ಕೆಜಿಹಳ್ಳಿ ಗೆ ಆಗಮಿಸಿದಾಗ ಬಿಜೆಪಿ ಸ್ವಪಕ್ಷದವರೇ ರಥಕ್ಕೆ ಪೂರ್ಣಕುಂಭ ಕಲಶಗಳ ಸ್ವಾಗತ ದಿಂದ ಕರೆದೋಯ್ಯಬೇಕು ಎಂದು ಪಟ್ಟುಹಿಡಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಹಾಗೂ ಹೂಡಿ ವಿಜಯ್ ಕುಮಾರ್ ಅವರ ಬೆಂಬಲಿಗ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ತಿಳಿಗೊಳಿಸಿದರು.


ಸರ್ಕಾರಿ ಕಾರ್ಯಕ್ರಮ ನಿಗದಿಯಂತೆ ಶುಕ್ರವಾರ ಮದ್ಯಾಹ್ನ ಕೆಂಪೇಗೌಡ ರಥಯಾತ್ರೆ ಆಗಮಿಸಬೇಕಾಗಿತ್ತು ಆದರೆ ಸಮಯಕ್ಕೆಸರಿಯಾಗಿ ರಥಯಾತ್ರೆ ಆಗಮಿಸದೆ ಸಂಜೆ ಬಂಗಾರಪೇಟೆಯಿಂದ ಪಾರ್ಶಗಾನಹಳ್ಳಿ ಮಾರ್ಗವಾಗಿ ರಥಯಾತ್ರೆ ಕೆಜಿಹಳ್ಳಿ ಗ್ರಾಮಕ್ಕೆ ಆಗಮಿಸಿದ ವೇಳೆ ಬಿಜೆಪಿಯ ಹೂಡಿ ವಿಜಯ್ ಕುಮಾರ್ ಆರ್.ಪ್ರಭಾಕರ್ ಅವರ ಬೆಂಬಲಿಗರು ರಥಕ್ಕೆ ಸ್ವಾಗತ ಕೋರಲು ಪೂರ್ಣ ಕುಂಭ ಕಳಶಗಳನ್ನು ಹೊತ್ತ ಮಹಿಳೆಯರು ಸ್ವಾಗತ ಕೋರಲು ಆಗಮಿಸದ ಕಾರಣ ರಥ ಯಾತ್ರೆ ಹೋಗುವುದು ಬೇಡ ಎಂದು ಪಟ್ಟು ಹಿಡಿದು ಕಾರಣ ಸಂಸದ ಎಸ್.ಮುನಿಸ್ವಾಮಿ ಯವರು ಕಾರ್ಯಕ್ರಮಕ್ಕೆ ಈಗಾಗಲೇ ತಡವಾಗಿದೆ ಎಂದು ಮನವೊಲಿಸಲು ಎಷ್ಟೇ ಪ್ರಯತ್ನಿಸಿದರು. ಹೂಡಿ ವಿಜಯ್ ಕುಮಾರ್ ಬೆಂಬಲಿಗರು ರಥ ಮುಂದೆ ಸಂಚರಿಸಲು ಬಿಡಲಿಲ್ಲ ಆಗ ಕಾರ್ಯಕ್ರಮ ನಿಗದಿಪಡಿಸಿದ ಸ್ಥಳದಿಂದ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಅವರು ಆಗಮಿಸಿ ಕೆಂಪೇಗೌಡ ರಥಯಾತ್ರೆಯು ತಾಲೂಕಿಗೆ ಆಗಮಿಸಿರುವುದು ಈಗಾಗಲೇ ತಡವಾಗಿದೆ ಪಕ್ಷಾತೀತವಾಗಿ ರಥಯಾತ್ರೆಗೆ ನಾವು ಭವ್ಯ ಸ್ವಾಗತವನ್ನು ಕೋರಬೇಕು ಹೊರತು ರಥಯಾತ್ರೆಗೆ ಅಡ್ಡಿಪಡಿಸುವುದು ಸರಿಯಲ್ಲವೆಂದು ಹೇಳಿದರು ಅಷ್ಟೊತ್ತಿಗೆ ಇಬ್ಬರ ಬೆಂಬಲಿಗ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ವಾಗ್ವಾದ ತಾರಕಕ್ಕೇರಿತು ಪೊಲೀಸರು ಮಧ್ಯಪ್ರವೇಶಿ ಎರಡು ಬಣಗಳನ್ನು ಮನವೊಲಿಸಿ ತಾಲೂಕು ಆಡಳಿತ ನಿಗದಿಪಡಿಸಿದ್ದ ಸ್ಥಳಕ್ಕೆ ಕೆಂಪೇಗೌಡ ರಥಯಾತ್ರೆ ತೆರಳಿತು.
ತಾಲೂಕು ಆಡಳಿತ ಹಮ್ಮಿಕೊಂಡಿದ್ದ ರಥ ಯಾತ್ರೆಯ ಭವ್ಯ ಸ್ವಾಗತ ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ ರಾಜ್ಯ ಸರ್ಕಾರ ಜಾತ್ಯತೀತ ನಾಯಕ ಕೆಂಪೇಗೌಡ ಅವರ ಪ್ರತಿಮೆಯನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಿಸಿದ್ದು ಅದೇ ಆವರಣದಲ್ಲಿ ಟೀಮ್ ಪಾರ್ಕ್ ನಿರ್ಮಿಸಲು ರಾಜ್ಯದ ಎಲ್ಲ ಕಡೆಯಿಂದ ಮಣ್ಣು ಸಂಗ್ರಹ ಹಾಗೂ ಕೆಂಪೇಗೌಡರ ಇತಿಹಾಸವನ್ನು ಸಾರುವ ರಥಯಾತ್ರೆ ಹಮ್ಮಿಕೊಂಡಿದೆ ಎಲ್ಲರೂ ಪಕ್ಷಾತೀತವಾಗಿ ರಥಯಾತ್ರೆಯನ್ನು ಸ್ವಾಗತಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಆದರೆ ಕೆಲವರು ರಥ ಯಾತ್ರೆಗೆ ಅಡ್ಡಿಪಡಿಸಿರುವುದು ಕೆಂಪೇಗೌಡ ಅವರಿಗೆ ಅಪಮಾನವೇಸಗಿದಂತೆ ಬಿಜೆಪಿ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ ನಾವೆಲ್ಲರೂ ಒಗ್ಗಟ್ಟಾಗಿ ರಥಯಾತ್ರೆಯನ್ನು ತಾಲೂಕಿನಲ್ಲಿ ಸಂಚರಿಸಲು ಸಹಕಾರ ನೀಡಬೇಕು ರಾಜ್ಯದ ಎಲ್ಲೆಡೆಗಳಿಂದ ಸಂಗ್ರಹಿಸಿದ ಮೃತ್ತಿಕೆ ಯನ್ನು ತಾಲೂಕು ಆಡಳಿತಕ್ಕೆ ಸಂಸದ ಎಸ್.ಮುನಿಸ್ವಾಮಿಯವರು ಹಸ್ತಾಂತರಿಸಿದರು.
ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಮಾತನಾಡಿ ಕೆಂಪೇಗೌಡ ರಥಯಾತ್ರೆಗೆ ಹೂಡಿ ವಿಜಯ್ ಕುಮಾರ್ ಆರ್.ಪ್ರಭಾಕರ್ ಹಾಗೂ ಅವರ ಬೆಂಬಲಿಗರು ಅಡ್ಡಿಪಡಿಸುವುದರ ಮೂಲಕ ಕೆಂಪೇಗೌಡ ರಥಯಾತ್ರೆಗೆ ಅಪಮಾನ ಮಾಡಿದ್ದಾರೆ ಇದು ಪಕ್ಷದಲ್ಲಿ ಒಳ್ಳೆಯ ಬೆಳವಣಿಗೆಗಳಲ್ಲ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದಾಗಲಿಂದ ಇಲ್ಲಿಯವರೆಗೆ ಯಾವುದಾದರೂ ಒಂದು ರೀತಿಯಲ್ಲಿ ತೊಂದರೆ ನೀಡುತ್ತಿದ್ದು ಈ ಬಗ್ಗೆ ಪಕ್ಷದ ವರಿಷ್ಠರಿಗೆ ತಿಳಿಸುವ ಮೂಲಕ ಇವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು
ಬಿಜೆಪಿ ಪ್ರಕೊಷ್ಟ ಫಲಾನುಭವಿಗಳ ಸಮಿತಿ ಸದಸ್ಯ ಹೂಡಿ ವಿಜಯ್ ಕುಮಾರ್ ಮಾತನಾಡಿ ಪೂರ್ಣ ಕುಂಭ ಕಲಶಗಳೊಂದಿಗೆ ರಥಯಾತ್ರೆ ಕರೆ ದೋಯ್ಯಲು ಸಂಸದರ ಬಳಿ ತಿಳಿಸಿದ್ದೆವು ಆದರೆ ಮಾಜಿ ಶಾಸಕರು ಏಕಾಏಕಿ ಆಗಮಿಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಸ್ವತಃ ಅವರೇ ಕಾರ್ಯಕರ್ತರ ವಾಹನ ಚಾಲನೆ ಮಾಡಲು ಮುಂದಾಗಿದ್ದು ಸರಿಯಲ್ಲ ಕೆಂಪೇಗೌಡ ರಥ ಆಗಮಿಸಿದ ವೇಳೆ ನಡೆದುಕೊಂಡ ರೀತಿ ಖಂಡನೀಯ ದೌರ್ಜನ್ಯ ನಡೆಸುವುದು ಬಿಜೆಪಿ ಸಂಸ್ಕೃತಿಯಲ್ಲ ನಡೆದ ಘಟನೆ ಬಗ್ಗೆ ಪಕ್ಷದ ವರಿಷ್ಟರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರುಣೆ
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ್ ಇ.ಓ.ಮುನಿರಾಜು ಕೆಜಿಹಳ್ಳಿ ಗ್ರಾ.ಪಂ ಅಧ್ಯಕ್ಷ ಅರುಣ್ ಶ್ರೀನಿವಾಸ್ ತಾಲೂಕು ಬಿಜೆಪಿ ಅಧ್ಯಕ್ಷಪುರ ನಾರಾಯಣಸ್ವಾಮಿ, ಮುಖಂಡರಾದ ಟಿ.ಬಿ.ಕೃಷ್ಣಪ್ಪ, ಸಯ್ಯದಅಜ್ಗರ್, ಹರೀಶ್‌ಗೌಡ, ನೂಟವೆವೆಂಕಟೇಶ್ ಗೌಡ, ಬಿ.ಆರ್.ವೆಂಕಟೇಶ್, ಎಸ್.ನಾರಾಯಣಸ್ವಾಮಿ, ಸೋಮಣ, ಚಂದ್ರಶೇಖರ್, ಸೇರಿದಂತೆ ಬಿಜೆಪಿ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.