ಕೆಂಪೇಗೌಡರ ನಾಯಕತ್ವ ಗುಣ ಬೆಳೆಸಿಕೊಳ್ಳಿ

ಕೋಲಾರ, ಜೂ.೩೦- ಆ ಕಾಲದಲ್ಲಿಯೇ ಭೂಗರ್ಭ ಶಾಸ್ತ್ರಜ್ಞರನ್ನು, ನೀರಾವರಿ ತಜ್ಞರನ್ನು ಬಳಸಿಕೊಂಡು ನವ ನಗರವನ್ನು ನಿರ್ಮಾಣ ಮಾಡಿ ದಕ್ಷ ಆಡಳಿತವನ್ನು ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸಿ ಜನರ ಹೃದಯದಲ್ಲಿ ಧೀಮಂತ ನಾಯಕನಾಗಿ ಅಮರರಾಗಿರುವ ನಾಡಪ್ರಭುಕೆಂಪೇಗೌಡರ ನಾಯಕತ್ವ ಗುಣಗಳನ್ನು ನೀವು ಸಹ ಬೆಳೆಸಿಕೊಂಡು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಬೇಕೆಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ:ಎಂ.ಚಂದ್ರಶೇಖರ್ ಕರೆ ನೀಡಿದರು.
ಬಂಗಾರಪೇಟೆ ತಾಲ್ಲೂಕಿನ ಹಂಚಾಳ ಗೇಟ್‌ನಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ೫೧೪ನೇ ಜಯಂತೋತ್ಸವನ್ನು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿಯೇ ಇಂದು ಬೆಂಗಳೂರು ತಂತ್ರಜ್ಞಾನ ಕೇಂದ್ರವಾಗಿ ಹೊರಹೊಮ್ಮಲು ಕೆಂಪೇಗೌಡರೇ ಕಾರಣರು, ೧೬ ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಾಂತ ಅರಸರಾಗಿದ್ದ ಕೆಂಪೆಗೌಡರು ಬೆಂಗಳೂರು ನಗರ ನಿರ್ಮಾಣಕ್ಕೆ ನೀಲಿ ನಕ್ಷೆಯನ್ನು ಸಿದ್ದಪಡಿಸಿ ೬೬ ಪೇಟೆಗಳನ್ನು ನೊರಾರು ಕೆರೆಗಳನ್ನು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಕಾವಲು ಗೋಪುರಗಳನ್ನು ಬೆಂಗಳೂರು ಬೆಳೆದಂತೆಲ್ಲಾ ನೀರಿನ ಸಮಸ್ಯೆಯಾಗದಂತೆ ಮುಂದಾಲೋಚನೆಯಿಂದ ರಾಜ ಕಾಲುವೆಗಳನ್ನು ನಿರ್ಮಿಸಿದ್ದರು. ಆ ಕಾಲದಲ್ಲಿಯೇ ಭೂಗರ್ಭ ಶಾಸ್ತ್ರಜ್ಞರನ್ನು, ನೀರಾವರಿ ತಜ್ಞರನ್ನು ಬಳಸಿಕೊಂಡು ನವ ನಗರವನ್ನು ನಿರ್ಮಾಣ ಮಾಡಿದಕ್ಷ ಆಡಳಿತವನ್ನು ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸಿ ಜನರ ಹೃದಯದಲ್ಲಿ ಧೀಮಂತ ನಾಯಕನಾಗಿ ಅಮರರಾಗಿದ್ದಾರೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ನೀವು ಕೂಡ ಇದೇ ರೀತಿಯಾದ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಶಿಕ್ಷಕರಾದ ಆದಿಬಯ್ಯಪ್ಪ ಹಿತ ನುಡಿಗಳನ್ನು ನುಡಿದರು. ಮುಖ್ಯೋಪಾಧ್ಯಾಯ ಎಸ್.ಲಕ್ಷ್ಮೀನಾರಾಯಣರೆಡ್ಡಿ, ಸಿ.ಎಸ್. ಸತೀಶ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಿ.ವೆಂಕಟೇಶಪ್ಪ, ಸಿ.ಜಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ವೆಂಕಟಪತಿ, ನಿರ್ದೇಶಕ ವೆಂಕಟೇಶಪ್ಪ ಉಪಸ್ಥಿತರಿದ್ದರು. ಸ್ವರ್ಣಲತ ಸ್ವಾಗತಿಸಿ, ಎಂ.ಪಾಪಣ್ಣ ಕಾರ್ಯಕ್ರಮ ನಿರೂಪಿಸಿದರು.