ಕೆಂಪೇಗೌಡರು ಜಾತ್ಯತೀತ ಸಿದ್ಧಾಂತದ ಹರಿಕಾರ

ಬೆಂಗಳೂರು, ನ.೫- ಜಾತ್ಯಾತೀತ ಸಿದ್ಧಾಂತದ ಹರಿಕಾರ ನಾಡಪ್ರಭು ಕೆಂಪೇಗೌಡರ ಸಾಧನೆ, ಇತಿಹಾಸ ವಿಶ್ವಕ್ಕೆ ಮಾದರಿ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡ ೧೦೮ಕಂಚಿನ ಭವ್ಯ ಪ್ರತಿಮೆ ಆನಾವರಣ ಪ್ರಯುಕ್ತ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ||ರಾಜ್ ಕುಮಾರ್ ವಾರ್ಡ್‌ನಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ಮತ್ತು ಬೈಕ್ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸ್ಥಳೀಯ ಶಾಸಕರು,ವಸತಿ ಸಚಿವರಾದ ವಿ.ಸೋಮಣ್ಣರವರು ನಾಡಪ್ರಭು ಕೆಂಪೇಗೌಡರು ದೂರದೃಷ್ಟಿ ಚಿಂತಕ, ಅಭಿವೃದ್ದಿಯ ಹರಿಕಾರ. ೫೦೦ವರ್ಷಗಳ ಹಿಂದೆ ಬೆಂಗಳೂರು ನಗರ ನಿರ್ಮಾಣ ಮಾಡಿದರು ಅದರ ಇತಿಹಾಸವನ್ನು ಎಲ್ಲರು ಅರಿಯಬೇಕು ಎಂದರು.
ಇತಿಹಾಸ ಪುರುಷ ನಾಡಪ್ರಭು ಕೆಂಪೇಗೌಡರ ಸಾಧನೆಗಳನ್ನು ರಾಷ್ಟ್ರ ಮತ್ತು ವಿಶ್ವಕ್ಕೆ ಪರಿಚಯಿಸಲು ಮುಖ್ಯಮಂತ್ರಿಗಳಾದ ಬಸವರಾಜ್ ಎಸ್.ಬೊಮ್ಮಾಯಿರವರ ನೇತೃತ್ವದಲ್ಲಿ ೧೦೮ಅಡಿಯ ಕಂಚಿನ ಭವ್ಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರಮೋದಿರವರು ಲೋಕರ್ಪಣೆ ಮಾಡಲಿದ್ದಾರೆ. ನಾಡಪ್ರಭು ಕೆಂಪೇಗೌಡರು ಜಾತ್ಯತೀತ ಸಿದ್ದಾಂತದ ಹರಿಕಾರ ಉದ್ಯೋಗದ ತಕ್ಕಂತೆ ಪೇಟೆಗಳನ್ನು ನಿರ್ಮಿಸಿದರು ಬಳೇಪೇಟೆ, ಅಕ್ಕಿಪೇಟೆ,ಗಾಣಿಗರ ಪೇಟೆ, ಚಿಕ್ಕಪೇಟೆ ಹಲವಾರು ಪೇಟೆಗಳನ್ನು ನಿರ್ಮಿಸಿದರು. ನಗರ ಪರಿಸರ ಮತ್ತು ಮಳೆ ನೀರು ಪೋಲಾಗದಂತೆ ತಡೆಯಲು ೨೦೦ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದರು ಎಂದರು.
ಅದಿಚುಂಚನಗಿರಿಮಠ ಪೀಠಾಧಿಪತಿಗಳಾಗಿದ್ದ ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಮತ್ತು ಇಂದಿನ ಪೀಠಾಧಿಪತಿಗಳಾದ ನಿರ್ಮಾಲಾನಂದನಾಥ ಸ್ವಾಮೀಜಿರವರ ಆಶೀರ್ವಾದದಿಂದ ನಾಡಪ್ರಭು ಕೆಂಪೇಗೌಡ ಮೃತ್ತಿಕ ಸಂಗ್ರಹ ರಥಯಾತ್ರೆ ಸಾಗುತ್ತಿದೆ.
ನಾಡಿನ ಎಲ್ಲ ಜಿಲ್ಲೆಗಳು, ಬೆಂಗಳೂರುನಗರ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಪವಿತ್ರ ಮೃತ್ತಿಕೆ ಸಂಗ್ರಹ ಮಾಡಲಾಗುತ್ತಿದೆ ಎಂದರು.
ನಾಡಪ್ರಭು ಕೆಂಪೇಗೌಡರ ರಥಯಾತ್ರೆ ಮತ್ತು ಪ್ರತಿಮೆ ಉದ್ಘಾಟನೆ ನಾಡಿನ ಆರುವರೆ ಕೋಟಿ ಜನರು ಪಾಲ್ಗೊಳ್ಳಬೇಕು ಎಂದು ಸಚಿವ ಸೋಮಣ್ಣ ಕರೆ ನೀಡಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ೯ವಾರ್ಡ್ ಗಳಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹ ನಾಡಪ್ರಭು ಕೆಂಪೇಗೌಡ ಭವ್ಯ ರಥ ಸಂಚರಿಸಿತು.
ಬಿಬಿಎಂಪಿ ಜಂಟಿ ಆಯುಕ್ತರಾದ ಯೋಗೇಶ್, ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಗಂಗಭೈರಯ್ಯ, ಕೆ.ಉಮೇಶ್ ಶೆಟ್ಟಿ, ವಾಗೇಶ್,ದಾಸೇ ಗೌಡ,ರಾಮಪ್ಪ,ಜಯರತ್ನ ಮತ್ತು ಬಿ.ಜೆ.ಪಿ.ಮುಖಂಡರುಗಳಾದ ಸಿ.ಎಂ. ರಾಜಪ್ಪ, ಶ್ರೀಧರ್‌ರವರು ಪಾಲ್ಗೊಂಡಿದ್ದರು.