ಕೆಂಪು ಸೀರೆಯಲ್ಲಿ ಸುಂದರಿ ಸಾನ್ಯಾ

ಬೆಂಗಳೂರು,ಏ.೨೪-ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಐಯ್ಯರ್ ಮತ್ತೆ ತಮ್ಮ ಹೊಸ ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದಾರೆ. ಕೆಂಪು ಬಣ್ಣದ ಚೆಂದದ ಸೀರೆಯುಟ್ಟು ಕ್ಯಾಮೆರಾಗೆ ಕ್ಯೂಟ್ ಆಗಿ ಫೋಸ್ ಕೊಟ್ಟಿದ್ದಾರೆ.
ಸಾನ್ಯಾ ಐಯ್ಯರ್ ಅಕ್ಷಯ ತೃತೀಯ ಹಿನ್ನೆಲೆ ರೆಡ್ ಕಲರ್ ಸೀರೆಯುಟ್ಟು ಫೋಟೊಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಿಮ್ಮ ಖುಷಿ ಅಕ್ಷಯವಾಗಲಿ ಎಂದು ಕ್ಯಾಪ್ಷನ್ ಹಾಕಿದ್ದಾರೆ.
ಸದ್ಯ ಸಾನ್ಯಾ ಶೇರ್ ಮಾಡಿರುವ ಫೋಟೋಗಳಿಗೆ ೧೩ ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸಾನ್ಯಾ ಐಯ್ಯರ್ ಸೀರೆ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸೋ ಸ್ವೀಟ್, ಎಥ್‌ನಿಕ್ ಬ್ಯೂಟಿ, ಸುಂದರವಾಗಿ ಕಾಣ್ತಾ ಇದ್ದಾರೆ. ನಿಮಗೆ ಸೀರೆ ತುಂಬಾ ಚೆನ್ನಾಗಿ ಸೂಟ್ ಆಗುತ್ತೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಸೀರೆ ಅಂದ್ರೆ ಸಾನ್ಯಾ ಐಯ್ಯರ್‌ಗೆ ತುಂಬಾ ಇಷ್ಟ. ರೇಷ್ಮೆ ಸೀರೆ ಇನ್ನು ಇಷ್ಟ ಅಂತೆ. ಆಗಾಗಾ ಸೀರೆ ಉಟ್ಟಿರುವ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.