ಕೆಂಪು ಧೂಳಿನಿಂದ ಶ್ವಾಸಕೋಶದ ಅಸ್ವಸ್ಥತೆ: ವಿಜಯಕುಮಾರ

ಬೀದರಃ ಡಿ.2:ನಾವು ಮನೆಯಿಂದ ದ್ವಿಚಕ್ರ ವಾಹನ, ಸ್ಕೂಟಿಗಳ ಮೇಲೆ ಶಾಲಾ-ಕಾಲೇಜುಗಳಿಗೆ ಹೋಗುವ ದಾರಿಯ ಮಧ್ಯೆ ಕೆಂಪು ಮಣ್ಣಿನ ಧೂಳು ಮೂಗಿನ ಮೂಲಕ ಶ್ವಾಶಕೋಶಗಳಲ್ಲಿ ಹೋಗಿ ನಮಗೆ ಅಸ್ವಸ್ಥತೆಯನ್ನುಂಟುಮಾಡುತ್ತದೆ. ಮತ್ತು ಇದು ಅಲರ್ಜಿಯನ್ನಾಗಿ ಕಾಡುವುದರ ಮೂಲಕ ಅನಾರೋಗ್ಯಕ್ಕೆ ಒಳಗಾಗುತ್ತೇವೆ. ಜೊತೆಗೆ ವಾಹನಗಳಿಂದ ಹೊರಸೂಸುವ ಇಂಗಾಲಡೈಆಕ್ಸೈಡ್‍ದಿಂದಲೂ ಅನಾರೋಗ್ಯವುಂಟಾಗುತ್ತದೆ. ಇದರಿಂದ ರಕ್ಷಣಾತ್ಮಕವಾಗಿ ಜಾಗರೂಕತೆಯಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮಾಸ್ಕ್‍ಗನ್ನು ಧರಿಸುವ ಮೂಲಕ ಪರಿಸರ ಮಾಲಿನ್ಯ ಕಾಪಾಡುವುದರೊಂದಿಗೆ ಇತರರಿಗೂ ಮಾಹಿತಿ ನೀಡಬೇಕು. ಎಂದು ಬೀದರ ಸಂಚಾರ ಪೋಲಿಸ್ ಠಾಣೆಯ ಸಿಪಿಐ ವಿಜಯಕುಮಾರ ಬಿರಾದಾರ ಅವರು ವಿದ್ಯಾರ್ಥಿ-ವಿದ್ಯಾರ್ಥಿನಿಯರುಗಳಿಗೆ ಕರೆ ನೀಡಿದರು.

ನಗರದ ಬಿ.ವಿ. ಭೂಮರೆಡ್ಡಿ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬೀದರ ಪ್ರಾದೇಶಿಕ ಸಾರಿಗೆ ಇಲಾಖೆ, ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ರಾಷ್ಟ್ರೀಯ ಸೇವಾ ಯೋಜನೆ ಅ ಮತ್ತು ಬಿ ಘಟಕ ಮತ್ತು ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಸಹಯೋಗದಲ್ಲಿ ಹಮ್ಮಿಕೊಂಡ ವಾಯುಮಾಲಿನ್ಯ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡುತಿದ್ದರು. ಮುಂದುವರೆದು ತುರ್ತು ಸಂದರ್ಭಗಳಲ್ಲಿ ವಿದ್ಯಾರ್ಥಿನಿಯರು ಮತ್ತು ಇತರರು ತುರ್ತು ಸಹಾಯದ 112 ಗೆ ಕರೆ ಮಾಡಿ ಮಾಹಿತಿ ನೀಡಿದರೆ ತಕ್ಷಣವೇ ನಿಮಗೆ ಪೋಲಿಸ್ ನೆರವು ವಾಹನ ಆಗಮಿಸುತ್ತದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಿಪಿಐ ಬಿರಾದಾರ ಕರೆ ನೀಡಿದರು.

ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಶಿವಶಂಕರ ಅವರು ಮಾತನಾಡಿ ಪ್ರತಿಯೊಬ್ಬರು ತಮ್ಮ ವಾಹಗನಳಿಗೆ ಹೊಗೆ ಬರುವ ಪಿಯುಸಿ ತಪಾಸಣೆ ತಪ್ಪದೆ ಕಾಲಕಾಲಕ್ಕೆ ಮಾಡಿಸಬೇಕು. ಮಾಡಿಸದಿದ್ದರೆ ದ್ವೀಚಕ್ರವಾಹನಗಳಿU É1500 ರೂ. ಮತ್ತು ನಾಲ್ಕು ಚಕ್ರ ವಾಹನಳಿಗೆ 3000 ರೂ. ದಂಡವಿರುವುದು ಎಂದವರು ತಮ್ಮ ಬಳಿಯಿರುವ ಪ್ರತಿ ವಾಹನಕ್ಕೆ ಒಂದರಂತೆ ಸಸಿಗಳನ್ನು ನೆಟ್ಟು ಪರಿಸರ ನೈರ್ಮಲ್ಯ ಕಾಪಾಡಬೇಕೆಂದರು.

ಪ್ರಾಚಾರ್ಯ ವಿ. ಎಂ. Zನ್ನÀಶೆಟ್ಟಿ ಮಾತನಾಡಿ, 1 ಕಿ. ಮೀ. ಅಂತರದಲ್ಲಿರುವ ತಮ್ಮ ಮನೆಗಳಿಂದ ವಿದ್ಯಾರ್ಥಿಗಳು ವಾಹನ ಬಳಸದೆ ಕಾಲ್ನಡಿಗೆಯಲ್ಲಿ ಬರಬೇಕೆಂದರು. ತಿನ್ನುವ ಆಹಾರ ಪದಾರ್ಥಗಳ ಚೂರು-ಪಾರು ಮತ್ತು ಪ್ಲಾಷ್ಟಿಕ್ ಕ್ಯಾರಿಬ್ಯಾಗಗಳು ರಸ್ತೆಯ ಮೇಲೆ ಎಸೆಯಬಾರದೆಂದರು. ಪ್ರಾಂಶುಪಾಲ ಶಿವರಾಜ ಜಮಾದಾರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಓಣಿಗಳಲ್ಲಿ ಮತ್ತು ತಾವು ವಾಸವಾಗಿರುವ ಊರು-ಕೇರಿಗಳಲ್ಲಿ ಸಸಿಗಳನ್ನು ನೆಡಬೇಕೆಂದರು.

ವೇದಿಕೆಯ ಮೇಲೆರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ದೀಪರಾಗಾ, ಡಾ. ಸಂತೋಷ ಹಂಗರಗಿ, ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಾಹೀಲ್ ಸ್ವಾಗತಿಸಿದರು. ಕೊನೆಯಲ್ಲಿ ಕು. ವೈಶಾಲಿ ವಂದಿಸಿದರು.