ಕೆಂಪನಪುರ ಸಮೀಪ ಕುರಿಗಳ ಮೇಲೆ ಚಿರತೆ ದಾಳಿ

ಸಂಜೆವಾಣಿ ವಾರ್ತೆ
ಚಾಮರಾಜನಗರ,ಮಾ.02-ಚಿರತೆ ದಾಳಿಗೆ ಕುರಿಗಳು ಬಲಿಯಾದ ಘಟನೆ ಚಾಮರಾಜನಗರ ತಾಲ್ಲೂಕಿನ ಕೆಂಪನಪುರ ಸಮೀಪ ಕುದರೆ ಹಳ್ಳದಲ್ಲಿ ಶುಕ್ರವಾರ ನಡೆದಿದೆ.
ರೈತರೊಬ್ಬರು ಕುರಿಗಳನ್ನು ಮೇಯಿಸಲು ಗ್ರಾಮದ ಹೊರವಲಯಕ್ಕೆ ಬೆಳಗ್ಗೆ ಕುರಿಗಳನ್ನು ಕರೆದೊದ್ದಿದ್ದರು. ಕುರಿಗಳ ಮೇಲೆ ಹಠಾತ್ ದಾಳಿ 2 ಕುರಿಗಳನ್ನು ಕೊಂದು ಹಾಕಿರುವುದು ಕಂಡುಬಂದಿದೆ ಅಲ್ಲೇ ಇದ್ದ ರೈತ ಗಾಬರಿಯಿಂದ ಗ್ರಾಮಸ್ಥರು ತಿಳಿಸಿದ್ದಾರೆ.
ಕುರಿಗಳು ಕೆಂಪನಪುರ ಗ್ರಾಮದ ಮರಿನಂಜಯ್ಯ ಹಾಗೂ ಸುಶಿಯಪ್ಪ ಅವರಿಗೇ ಸೇರಿದ್ದು ಎಂದು ತಿಳಿದು ಬಂದಿದೆ.
ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳಿಂದ ಕಾಡಂಚಿನ ಗ್ರಾಮದವರಿಗೆ ತೊಂದರೆ ಯಾಗುತ್ತಿದೆ. ಕಷ್ಟಪಟ್ಟು ಹಣ ನೀಡಿ ಕುರಿಗಳನ್ನು ತಂದಿದ್ದೇವೆ ಮೇಯಿಸಲು ಹೋದಾಗ ಕಾಡು ಪ್ರಾಣಿಗಳು ಏಕಾಏಕಿ ದಾಳಿ ನಡೆಸಿ ಕುರಿಗಳನ್ನು ಕೊಂದರೆ ಏನು ಮಾಡೊದು.
ನಮಗೆ ಆರಣ್ಯ ಇಲಾಖೆಯಿಂದ ಪರಿಹಾರ ನೀಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯರಾದ ಮಹದೇವಸ್ವಾಮಿ ತಿಳಿಸಿದ್ದಾರೆ.
ಗ್ರಾಮ ಸರ್ಕಾರಿ ನಿವೃತ್ತ ನೌಕರರ ಚೆನ್ನಬಸವಯ್ಯ ಅವರು ಅರಣ್ಯ ಇಲಾಖೆಯವರು ತಕ್ಷಣ ಬೋನ್ ಇಟ್ಟು ಚಿರತೆಯನ್ನು ಸೆರೆಯಿಡಲು ಆಗ್ರಹಿಸಿದ್ದಾರೆ.