ಕೆಂಪನಪುರ ಗ್ರಾ.ಪಂ. ಸದಸ್ಯರಾಗಿ ಕೆ.ಸಿ. ನಾಗರಾಜು ಆಯ್ಕೆ

ಚಾಮರಾಜನಗರ, ಜ.02- ತಾಲ್ಲೂಕಿನ ಕೆಂಪನಪುರ ಗ್ರಾಮ ಪಂಚಾಯತಿ ಸಾಮಾನ್ಯ ಕ್ಷೇತ್ರದಿಂದ ಕೆ.ಸಿ. ನಾಗರಾಜು ಭರ್ಜರಿ ಜಯಗಳಿಸಿದ್ದಾರೆ.
ಅವರು 495 ಮತಗಳನ್ನು ಪಡೆದು ತಮ್ಮ ಸಮೀಪ ಸ್ಪರ್ಧಿ ಬಸವರಾಜು ರವರನ್ನು 173 ಗಳಿಂದ ಸೋಲಿಸಿ ಭಾರಿ ಅಂತರದಿಂದ ಜಯಗಳಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನನ್ನ ಗೆಲುವಿಗೆ ಸಹಕರಿಸಿದ ಗ್ರಾಮದ ಎಲ್ಲಾ ವರ್ಗದ ಜನರಿಗೂ ಹಾಗೂ ಗ್ರಾಮದ ಎಲ್ಲಾ ಮುಖಂಡರುಗಳಿಗೆ ನಾನು ಚಿರಋಣಿಯಾಗಿರುತ್ತೇನೆ. ಇನ್ನು ಮುಂದೆ ನಾನು ನನ್ನ ವ್ಯಾಪ್ತಿಗೆ ಬರುವ ಎಲ್ಲಾ ಕೆಲಸ ಕಾರ್ಯಗಳನ್ನು ಕೈಗೊಂಡು ಎಲ್ಲರ ಸಹಕಾರವನ್ನು ಪಡೆದು ಗ್ರಾಮದ ಗ್ರಾಮವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ನಂತರ ಅವರ ಬೆಂಬಲಿಗರು ಕೆ.ಸಿ. ನಾಗರಾಜು ಹಾಗೂ ಮುಖಂಡರುಗಳನ್ನು ಹಾರ ಹಾಕಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಿ.ಎಲ್.ಡಿ. ಬ್ಯಾಂಕ್ ಮಾಜಿ ನಿರ್ದೇಶಕ ಶ್ರೀಕಂಠಸ್ವಾಮಿ, ಎಂ.ಡಿ.ಸಿ.ಸಿ. ಮಾಜಿ ನಿರ್ದೇಶಕ ಶಿವಶಂಕರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಗುರುಸಿದ್ದಪ್ಪ, ಎಂ.ಪಿ.ಸಿ.ಎಸ್. ಮಾಜಿ ಅಧ್ಯಕ್ಷ ಪ್ರಭುಸ್ವಾಮಿ, ಕುಮಾರ್ ಇತರರು ಹಾಜರಿದ್ದರು.