ಕೆಂಡದ ಸೆರಗಿಗೆ ಧ್ವನಿಯಾದ ಮಾಲಾಶ್ರೀ

ಕುಸ್ತಿ ಆಧಾರಿತ “ ಕೆಂಡದ ಸೆರಗು” ಚಿತ್ರದಕ್ಕೆ  ಹಿರಿಯ ನಟಿ ಮಾಲಾಶ್ರೀ ಅವರು ಹಲವು ವರ್ಷದ ಬಳಿಕ ತಮ್ಮ ಧ್ವನಿ ನೀಡಿದ್ದಾರೆ. ಇದು ಚಿತ್ರದ ವಿಶೇಷ ಎಂದು ನಿರ್ದೇಶಕ ರಾಕಿ ಸೋಮ್ಲಿ ಮಾಹಿತಿ ಹಂಚಿಕೊಂಡಿದ್ದಾರೆ

ಹಿರಿಯ ನಟಿ ಮಾಲಾಶ್ರೀ ಪ್ರತಿಕ್ರಿಯೆ ನೀಡಿ, “ಕೆಂಡದ ಸೆರಗು” ದೇಸಿ ಕುಸ್ತಿ ಕಥೆಯ ಜೊತೆಗೆ ಹೃದಯಕ್ಕೆ ಹತ್ತಿರುವವಾಗು ಭಾವನಾತ್ಮಕ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಸಿನಿಮಾ, ಒಂದೊಂದು ಪಾತ್ರವೂ ಸಹ ತುಂಬ ವಿಶೇಷವಾದ ಪಾತ್ರಗಳಿವೆ ಎನ್ನುವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ತಂಡದ ಪ್ರತಿ ಒಬ್ಬರು ಸಹ ತುಂಬಾನೇ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಖಂಡಿತವಾಗಿ ಗೆಲ್ಲುವ ಸಿನಿಮಾ,ವರ್ಷದ ಸಾಲಿನಲ್ಲಿ ನಿಲ್ಲುವ ಸಿನಿಮಾ, ಈ ತಂಡದ ಜೊತೆಗೆ ನಾ ಸದ ಇರುತ್ತೇನೆ ಎಂದು ಹೇಳಿದ್ದಾರೆ.

ಚಿತ್ರಿಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕೆಂಡದ ಸೆರಗು ಇನ್ನೆರಡು ತಿಂಗಳಲ್ಲಿ ಬಿಡುಗಡೆಗೆ ನೀರಿಕ್ಷೆಯಲ್ಲಿದೆ. ಚಿತ್ರದಲ್ಲಿ ನಾಲ್ಕು ಫೈಟ್, ಆರು ಹಾಡುಗಳಲ್ಲಿದ್ದು ಈಗಾಗಲೇ ಒಂದು ಹಾಡು ಮತ್ತು ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.

ತಾರಾಗಣದಲ್ಲಿ ಯಶ್ ಶೆಟ್ಟಿ, ವರ್ಧನ್, ಬಾಲುರಾಜ್ ವಾಡಿ, ಶೋಭಿತ, ಹರೀಶ್ ಅರಸು, ಪ್ರತಿಮಾ, ಮೋಹನ್, ಸಿಂಧನೂರು ಉಮೇಶ್, ಸಿಂದೂಲೋಕನಾಥ್ ಅಭಿನಯಿಸಿದ್ದಾರೆ. ವಿಪಿನ್ ರಾಜ್ ಛಾಯಾಗ್ರಹಣ, ವೀರೇಶ್ ಕಬ್ಳಿ  ಸಂಗೀತವಿದೆ, ಕೊಟ್ರೇಶ್ ಗೌಡ ಬಂಡವಾಳ ಹಾಕಿದ್ದಾರೆ.