
ಕೂಡ್ಲಿಗಿ.ಏ.4:-ತಾಲೂಕಿನ ಗಡಿಭಾಗದ ಕೆಂಚಮಲ್ಲನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ರಚನೆ ಮಾಡಲಾಗಿದ್ದು ಪಿ.ಬಸಪ್ಪ ಅಧ್ಯಕ್ಷರಾಗಿ, ಈ.ಮಂಜುಳ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಯಗುರುಗಳಾದ ಹೆಚ್. ಎಂ. ಮಂಜುನಾಥ ತಿಳಿಸಿದ್ದಾರೆ.
ಕೆಂಚಮಲ್ಲನಹಳ್ಳಿಯಲ್ಲಿ ಶಾಲಾಭಿವೃಧ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯನ್ನು ಎಲ್ಲಾ ಪಾಲಕ ಪೋಷಕರ ಸಮ್ಮುಖದಲ್ಲಿ ರಚಿಸಲಾಯಿತು. ಸರ್ವಾನುಮತದಿಂದ ಅಧ್ಯಕ್ಷರಾಗಿ ಪಿ.ಬಸಪ್ಪ ಮತ್ತು ಉಪಧ್ಯಾಕ್ಷರಾಗಿ ಈ.ಮಂಜುಳ ಅವರನ್ನು ಆಯ್ಕೆಮಾಡಲಾಯಿತು.ಈ ಸಂಧರ್ಭದಲ್ಲಿ ಗ್ರಾಮದ ಪ್ರಮುಖರು ಗ್ರಾಮ ಪಂಚಾಯಿತಿ ಸದಸ್ಯರು ಸಂಪನ್ಮೂಲ ವ್ಯಕ್ತಿಗಳಾದ ಜಿ.ಟಿ.ಸಿದ್ದೇಶ್ವರ .ಪ್ರೌಢಶಾಲೆ ಮುಖ್ಯಗುರುಗಳಾದ ಕೊಟ್ರೇಶ್ ಹಾಗೂ ಮುಖ್ಯಗುರುಗಳಾದ ಹೆಚ್.ಎಂ.ಮಂಜುನಾಥ ಹಾಜರಿದ್ದರು.