ಕೆಂಚನಗುಡ್ಡ ಗ್ರಾಮದ ಲೆಕ್ಕಾಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸಿ ಮನವಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.31: ನಗರದ ತಹಶೀಲ್ದಾರ್ ಕಛೇರಿಯಲ್ಲಿ ತಾಂಡ ವಿಕಾಸ ಸಮಿತಿ ವತಿಯಿಂದ ಕೆಂಚನಗುಡ್ಡ ಗ್ರಾಮ ಲೆಕ್ಕಾಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ತಹಶೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿಗೆ ಮನವಿ ಪತ್ರ ಸಲ್ಲಿಸಿದರು.
ಕೆ.ತಾಂಡದ ನೀಲಮ್ಮ ಮಾತನಾಡಿ ಕೆಂಚನಗುಡ್ಡ, ಕೆ.ತಾಂಡ, ದೇವಾಲಪುರ ಗ್ರಾಮದ ಲೆಕ್ಕಾಧಿಕಾರಿ ಅವರು ಸರ್ಕಾರಿ ಯೋಜನೆಗಳನ್ನು ಸರಿಯಾಗಿ ಮಾಡಿಕೊಡದೇ ನಿರ್ಲಕ್ಷ್ಯ ತೋರುತ್ತಿರುವುದರಿಂದ ಇವರನ್ನು ತಕ್ಷಣದಿಂದ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.
ಆಮ್ಮ ಆದ್ಮಿ ಪಕ್ಷದ ಮುಖಂಡ ಧರಪ್ಪ ನಾಯಕ ಮಾತನಾಡಿ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ನೀಡುವ ಕ್ರಮಗಳನ್ನು ಅಧಿಕಾರಿಗಳು ಕೈಗೊಳಬೇಕು, ಸಾರ್ವಜನಿಕರಿಗೆ ಸ್ಪಷ್ಟವಾದ ಮಾಹಿತಿ ನೀಡಿ ಯೋಜನೆಯ ಸೌಲಭ್ಯವನ್ನು ನೀಡುವಂತೆ ತಿಳಿಸಿದರು.
ಕೆಂಚನಗುಡ್ಡ, ಕೆ.ತಾಂಡ, ದೇವಾಲಪುರ ಗ್ರಾಮದ ಗ್ರಾಮಸ್ಥರು ಇದ್ದರು.

Attachments area