ಕೆಂಗೋ ಹನುಮಂತಪ್ಪ ನಿಧನ; ಸಂತಾಪ

ದಾವಣಗೆರೆ, ಮೇ 29;  ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾಗಿದ್ದ ಕೆಂಗೋ ಹನುಮಂತಪ್ಪನವರು ಇಂದು ಬೆಳಿಗ್ಗೆ ನಿಧನರಾದರು.ಹನುಮಂತಪ್ಪನವರು ತಮ್ಮ ಸಮಾಜ ಸೇವೆಯ ಮೂಲಕ ಜಿಲ್ಲೆಯಲ್ಲಿ ಸಮಾಜದಲ್ಲಿ, ಒಳ್ಳೆಯ ಹೆಸರು ಪಡೆದಿದ್ದರು. ಹಿರಿಯರಾಗಿದ್ದ ಅವರು ಎಲ್ಲರನ್ನೂ ಬಹಳ ಗೌರವ, ಪ್ರೀತಿಯಿಂದ ಕಾಣುತ್ತಿದ್ದರು. ಕಾಂಗ್ರೆಸ್ ಪಕ್ಷದ ಮುಖಂಡರೂ ಆಗಿದ್ದ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು.ಸಂತಾಪ; ಕೆಂಗೋ ಹನುಮಂತಪ್ಪ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ,ಶಾಸಕರಾದ ಶಾಮನೂರು ಶಿವಶಂಕರಪ್ಪ,ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಹಿರಿಯ ಮುಖಂಡರಾದಬಳ್ಳಾರಿ ಷಣ್ಮುಖ ಪ್ಪ, ಜೆ.ಕೆ.ಕೊಟ್ರಬಸಪ್ಪ..ಪಿ.ರಾಜಕುಮಾರ.ಪರಶುರಾಮ..ರಾಜನಹಳ್ಳಿ ಶಿವಕುಮಾರ್.ಕುಂಬಳೂರು.ವಿರೂಪಾಕ್ಷಪ್ಪ ಪ್ಪ.ಗೋಣೆಪ್ಪ.ಹಾಲೇಕಲ್ಲ ಎಸ್.ಟಿ.ಅರವಿಂದ್.ಲೋಕಿಕೆರೆ ಸಿದ್ದಪ್ಪ.ಚೌಡಪ್ಪ.ಕೆ.ಪರಶುರಾಮ್.ಇಟ್ಟಿಗುಡಿಮಂಜುನಾಥ್.ಕೆ.ರೇವಣ್ಣ ಸಂತಾಪ ಸೂಚಿಸಿದ್ದಾರೆ.