ಕೃ.ವಿ.ವಿ. ಕೋವಿಡ್ ಸಿಕಾ ಕಾರ್ಯಕ್ರಮ

????????????????????????????????????

ರಾಯಚೂರು.ಏ.೩೦-ವಿದ್ಯಾಲಯ, ರಾಯಚೂರು ಮತ್ತು ಜಿಲ್ಲಾ ಆರೋಗ್ಯ ಕೇಂದ್ರ, ಕೃ.ವಿ.ವಿ.ರಾ ರೆಡ್‌ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯುಕ್ತಾಶ್ರದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಕೃ.ವಿ.ವಿ,. ರಾಯಚೂರಿನಲ್ಲಿ ಆಯೋಜಿಸಲಾಗಿತ್ತು.
ಕುಲಪತಿ ಡಾ.ಕೆ.ಎನ್. ಕಟ್ಟಿಮನಿರವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೃ.ವಿ.ವಿ,. ರಾಯಚೂರಿನ ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳಾದ ತ್ರೀವಿಕ್ರಮ ಜೋಷಿರವರು, ಸುನಿಲ್ ವರ್ಮಾರವರು, ಎಲ್ಲಾ ಅಧಿಕಾರಿಗಳು, ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಾಧಿಕಾರಿಗಳಾದ ಡಾ ರಾಮಕೃಷ್ಣ, ಡಾ. ವಿಜಯ್, ಆರ್.ಸಿ.ಹೆಚ್, ಡಾ. ಕೋಪ್ರರೇಶ್‌ಕುಮಾರ, ಸಿಬ್ಬಂದಿ ವರ್ಗದವರು, ಮತ್ತು ಕೃ.ವಿ.ವಿ,.ರಾಯಚೂರಿನ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಡಾ. ರಾಜಣ್ಣ ಕಾರ್ಯಕ್ರಮಾಧಿಕಾರಿಗಳಾದ ಡಾ. ಪ್ರಸನ್ನ ಕುಮಾರ್, ಸುಮಾರು ೨೦೦ಕ್ಕೊ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು, ಕೃ.ವಿ.ವಿ,.ರಾಯಚೂರಿನ ಆರೋಗ್ಯ ಅಧಿಕಾರಿಗಳು, ರಾಯಚೂರಿನ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಲಸಿಕೆಗಳನ್ನು ಪಡೆದರು. ಈ ಕಾರ್ಯಕ್ರಮದ ನೇತೃತ್ವವನ್ನು ಡಾ.ಎಂ.ನೇಮಿಚಂದ್ರಪ್ಪರವರು ಡೀನ್, (ವಿಕ್ಷೇ)ರವರು ವಹಿಸಿದ್ದರು.