ಕೃಷ್ಣ ಮಂದಿರದಲ್ಲಿ ಧಾತ್ರಿ ಹೋಮ

ಕಲಬುರಗಿ ನ 17: ಇಲ್ಲಿನ ವಿದ್ಯಾನಗರದ ಅಖಿಲ ಭಾರತ ಮಾಧ್ವ ಮಹಾ ಮಂಡಳ ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ ಮತ್ತು
ಶ್ರೀ ಕೃಷ್ಣ ಹಾಗೂ ಹನುಮ ಭೀಮ ಮಧ್ವರ ದೇವಸ್ಥಾನದ ಆವರಣದಲ್ಲಿ ಇಂದು ಬೆಳಿಗ್ಗೆ ಧಾತ್ರಿ ಹೋಮ ನೆರವೇರಿಸಲಾಯಿತು.
ಅಭಿಷೇಕ, ಸತ್ಯನಾರಾಯಣ ಪೂಜೆ,ಹಸ್ತೋದಕ ತೀರ್ಥ ಪ್ರಸಾದ ಜರುಗಿತು.ಕೋವಿಡ ಕಾರಣದಿಂದ ಕೇವಲ ಆಡಳಿತ ಮಂಡಳಿ ಸದಸ್ಯರು , ಗೋಪಾಲಕೃಷ್ಣ ಭಜನಾ ಮಂಡಳಿ ಹಾಗೂ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಂಜೆ 6.30 ಗಂಟೆಗೆ ಗೋಪಾಲಕೃಷ್ಣ ಭಜನಾ ಮಂಡಳಿ ವತಿಯಿಂದ ಭಜನೆ ಹಾಗೂ 7.30 ಗಂಟೆಗೆ ಗೋಪಾಲಕೃಷ್ಣ ಭಜನಾ ಮಂಡಳಿ ವತಿಯಿಂದ ಕಾರ್ತೀಕ ದೀಪೆÇೀತ್ಸವ ಹಮ್ಮಿಕೊಳ್ಳಲಾಗಿದೆ