ಕೃಷ್ಣ ಮಂದಿರದಲ್ಲಿ ತಪ್ತ ಮುದ್ರಾಧಾರಣೆ

ತುಮಕೂರು, ಜು. ೧೨- ಇಲ್ಲಿನ ಕೆ.ಆರ್. ಬಡಾವಣೆಯಲ್ಲಿರುವ ಶ್ರೀಕೃಷ್ಣ ಮಂದಿರದಲ್ಲಿ ತಪ್ತ ಮುದ್ರಾಧಾರಾಣಾ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಇಂದು ಬೆಳಿಗ್ಗೆ ೭ ಗಂಟೆಯಿಂದ ೯.೩೦ ರವರೆಗೆ ನಡೆದ ಈ ಪವಿತ್ರ ಕಾರ್ಯಕ್ರಮದಲ್ಲಿ ತುಮಕೂರು ನಗರ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಮತ್ತು ನೆಲಮಂಗಲ, ಚನ್ನಪಟ್ಟಣದಿಂದ ಸುಮಾರು ಎರಡು ಸಾವಿರಕ್ಕೂ ಅಧಿಕ ಭಕ್ತಾದಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು.
ತೀರ್ಥಹಳ್ಳಿ ಭೀಮನಕಟ್ಟೆಯ ಶ್ರೀ ಭೀಮಸೇತು ಮುನಿವೃಂದ ಮಠದ ಶ್ರೀ ರಘುವರೇಂದ್ರತೀರ್ಥ ಶ್ರೀಪಾದಂಗಳವರು ತಪ್ತ ಮುದ್ರಾಧಾರಾಣೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಮಂದಿರದ ಅಧ್ಯಕ್ಷ ಹೆಚ್.ಎಂ. ಶ್ರೀನಿವಾಸ ಹತ್ವಾರ್, ಕೆ. ನಾಗರಾಜಧನ್ಯ, ಜಿ.ಕೆ. ಶ್ರೀನಿವಾಸ್, ಗೋಪಾಲಕೃಷ್ಣ ಹತ್ವಾರ್, ಸತ್ಯನಾರಾಯಣರಾವ್, ಬಾಲಕೃಷ್ಣ ಹೆಬ್ಬಾರ್, ಕೆ.ಎಸ್. ಗೋಪಾಲಕೃಷ್ಣರಾವ್, ಎಂ.ಎಸ್. ಸೂರ್ಯನಾರಾಯಣ್ ಸೇರಿದಂತೆ ಕೃಷ್ಣಮಂದಿರದ ಟ್ರಸ್ಟಿಗಳು ಮಿತ್ರಕೂಟದ ನಿರ್ದೇಶಕರುಗಳು, ವ್ಯವಸ್ಥಾಪಕ ಹೆಚ್.ಎಲ್. ಜನಾರ್ಧನಭಟ್ ಮತ್ತಿತರರು ಉಪಸ್ಥಿತರಿದ್ದರು.