ಕೃಷ್ಣ ಮಂದಿರದಲ್ಲಿ ಅಧಿಕ ಮಾಸದ ಕಾರ್ಯಕ್ರಮ

ಕಲಬುರಗಿ,ಜು 15: ಇಲ್ಲಿನ ವಿದ್ಯಾನಗರದ ಶ್ರೀಕೃಷ್ಣ ಮಂದಿರದಲ್ಲಿ ಅಧಿಕ ಮಾಸದ ಪ್ರಯುಕ್ತ ಜುಲೈ 18 ರಿಂದ ಆಗಸ್ಟ್ 16 ರವರೆಗೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಪಂಚಾಮೃತ ಅಭಿಷೇಕ, ಅಲಂಕಾರ ಹಾಗೂ ಅಧಿಕಮಾಸದ ಕೊನೆಯ ದಿನ ತೀರ್ಥ ಮತ್ತು ಪ್ರಸಾದದ ವ್ಯವಸ್ಥೆ ಇರುತ್ತದೆ. ಸದ್ಭಕ್ತರು ಈ ಸೇವೆಯನ್ನು ಮಾಡಿಸಲು ಪ್ರತಿ ದಿನ ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಹಾಗೂ ಸಂಜೆ 5 ಗಂಟೆಯಿಂದ 8 ಗಂಟೆವರೆಗೆ ಅಖಿಲ ಭಾರತ ಮಾಧ್ವ ಮಹಾ ಮಂಡಳ ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯದ ಕಚೇರಿಯಲ್ಲಿ ಅಥವಾ ಅರ್ಚಕರ ಹತ್ತಿರ ತಮ್ಮ ಹೆಸರುಗಳನ್ನು ಮತ್ತು ಸೇವಾ ವಿವರಗಳನ್ನು ನಮೂದಿಸಲು ಕೋರಿದೆ ಮತ್ತು ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗಲು ಅಖಿಲ ಭಾರತ ಮಧ್ವ ಮಹಾಮಂಡಲ ಹಾಗೂ ಜಯತೀರ್ಥ ವಿದ್ಯಾರ್ಥಿ ನಿಲಯದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ವಿನಂತಿಸಿದ್ದಾರೆ.