ಕೃಷ್ಣ ಭಾಗ್ಯ ಜಲ ಅಧಿಕಾರಿಗಳ ಎಡವಟ್ಟು ರೈತರ ಜಮೀನಿಗೆ ನುಗ್ಗಿದ ನೀರು

ಬಸವನಬಾಗೇವಾಡಿ:ಮಾ.15: ಕೃಷ್ಣ ಭಾಗ್ಯ ಜಲ ಅಧಿಕಾರಿಗಳ ಎಡವಟ್ಟಿನಿಂದ ನಿರ್ಮಾಣ ಹಂತದಲ್ಲಿರುವ ಟಕ್ಕಳಕಿ ಶಾಖಾ ಕಾಲುವೆಗೆ ನೀರು ನುಗ್ಗಿ ಕಾಲುವೆ ಒಡೆದು ರೈತರ ಜಮೀನಿಗೆ ನೀರು ಹರಿದು ಅಪಾರ ಹಾನಿ ಉಂಟಾಗಿದೆ.

ಬೆಸಿಗೆ ಸಂಧರ್ಭದಲ್ಲಿ ರೈತರಿಗೆ ನೀರಿನ ಅಭಾವ ಉಂಟಾಗಬಾರದು ಎಂಭ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕಾಲುವೆಗಳಿಗೆ ನೀರು ಹರಿಲಾಗುತ್ತದೆ ಆದರೆ ಸೋಮವಾರ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾಲವಾಡಗಿ ಶಾಖಾ ಕಾಲುವೆಗೆ ಹರಿಸಿದ ನೀರು ಪ್ರಗತಿ ಹಂತದಲ್ಲಿರುವ ಟಕ್ಕಳಕಿ ಶಾಖಾ ಕಾಲುವೆಗೆ ನುಗ್ಗಿದೆ ನೀರಿನ ರಬಸಕ್ಕೆ ಕಾಲುವೆ ಒಡೆದು ನೀರು ರೈತರ ಜಮೀನಿಗೆ ಹರಿದ ಪರಿಣಾಮ ರೈತರು ಬೆಳೆದ ಜೋಳ, ಈರುಳ್ಳಿ ಸೇರಿದಂತೆ ವಿವಿಧ ಬಗೆಯ ಬೆಳೆ ಹಾನಿಯಾಗಿ ರೈತರು ಕೃಷ್ಣ ಭಾಗ್ಯ ಜಲ ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುವಂತಾಗಿದೆ.

ಸಾಲವಾಡಗಿ ಶಾಖಾ ಕಾಲುವೆಗೆ ನೀರು ಹರಿಸುವ ಮುಂಚೆ ಅಧಿಕಾರಿಗಳು ಮುನ್ನೇಚ್ಚರಿಕೆ ಕ್ರಮವಾಗಿ ಟಕ್ಕಳಕಿ ಶಾಖಾ ಕಾಲುವೆಗೆ ಗೇಟ್ ಹಾಕಬೇಕು ಅಧಿಕಾರಿಗಳು ಬೇಜವಬ್ದಾರಿಯಿಂದ ಟಕ್ಕಳಕಿ ಕಾಲುವೆಗೆ ಗೇಟ್ ಅಳಡಿಸದೇ ಮಣ್ಣಿನಿಂದ ತಡೆಗೊಡೆ ನಿರ್ಮಿಸಿದ್ದಾರೆ ನೀರಿನ ರಬಸಕ್ಕೆ ಮಣ್ಣಿನ ಗೋಡೆ ಒಡೆದು ಕಾಲುವೆಗೆ ನೀರು ನುಗ್ಗಿದೆ.

ಕೆಲ ತಿಂಗಳ ಹಿಂದೇ ಅಷ್ಟೇ ಮಳೆ ರಬಸಕ್ಕೆ ಕಾಲುವೆ ಒಡೆದು ರೈತರಿಗೆ ಅಪಾರ ಹಾನಿಯಾಗಿತ್ತು ಆ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ ಅಲ್ಲದೆ ಒಡೆದ ಕಾಲುವೆಗಳ ದುರಸ್ಥಿ ಮಾಡಿಲ್ಲ ಅಧಿಕಾರಿಗಳ ಈ ನಿರ್¯ಕ್ಷದಿಂದಲೇ ಪದೇ ಪದೇ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಸುರೇಶ ಬಡಿಗೇರ ರೈತ: ಕಳೆದ ಮೂರು ವರ್ಷದಿಂದ ಕಾಲುವೆ ಒಡೆದು ಜಮೀನಿಗೆ ನೀರು ನುಗ್ಗಿ ಅಂದಾಜು 4 ರಿಂದ 5 ಲಕ್ಷ ರು, ಹಾನಿಯಾಗುತ್ತಿದೆ, ಯಾವೊಬ್ಬ ಕೃಷ್ಣ ಭಾಗ್ಯಜಲ ಅಧಿಕಾರಿಗಳು ಮಾತ್ರ ನಮಗೆ ಆಗಿರುವ ಹಾನಿ ಬಗ್ಗೆ ವಿಚಾರಿಸಿಲ್ಲ.