ಕೃಷ್ಣ ಬೈರೇಗೌಡರಿಗೆ ಕೋಲಾರ ಜಿಲ್ಲೆಯ ಉಸ್ತುವಾರಿ ನೀಡಿ

ಕೋಲಾರ, ಮೇ ೩೦:ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದ ಶಾಸಕರಾದ ಕೃಷ್ಣ ಬೈರೇಗೌಡರಿಗೆ ನೂತನ ಸಚಿವ ಸಂಪುಟದಲ್ಲಿ ಕಂದಾಯ ಇಲಾಖೆಯನ್ನು ನೀಡಲಾಗಿದೆ. ಅವರಿಗೆ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡ ಬೇಕೆಂಬುವುದು ಕ್ಷೇತ್ರದ ಜನತೆಯ ಒತ್ತಾಯವಾಗಿದೆ.
ಕೃಷ್ಣ ಬೈರೇಗೌಡರು ಮೊಲತಹಃ ಕೋಲಾರ ತಾಲ್ಲೂಕಿನ ಚೌಡೇದೇನ ಹಳ್ಳಿಯ ಮಣ್ಣಿನ ಮಗ ಸಿ.ಬೈರೇಗೌಡರ ಪುತ್ರರಾಗಿದ್ದವರು. ಸಿ.ಬೈರೇಗೌಡರು ರಾಜ್ಯ ಸಚಿವ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿರುವಂತ ನಿಷ್ಟೊರವಾದಿಗಳು ರಾಜ್ಯದ ರಾಜಕಾರಣಿಗಳಲ್ಲಿ ಮೇರು ಸ್ಥಾನ ಪಡೆದವರು ಪ್ರಮಾಣಿಕತೆ ಮತ್ತೊಂದು ಹೆಸರಾಗಿದ್ದವರು.ಭ್ರಷ್ಟಚಾರದ ಕಡು ವಿರೋಧಿಗಳಾಗಿದ್ದು ಜಿಲ್ಲೆಯ ಎಲ್ಲಾ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟು ಜನಪರ ಆಡಳಿತವನ್ನು ನಿರ್ವಹಿಸುತ್ತಿದ್ದರು. ಜಿಲ್ಲೆಯಲ್ಲಿ ರೈತರಿಗೆ ಹೆಚ್ಚಿನ ಗೌರವವಾದ ಸ್ಥಾನಮಾನಗಳು ಸಿಗುವಂತೆ ಮಾಡಿದ್ದರು.
ಸಿ.ಬೈರೇಗೌಡರ ಮುದ್ದಿನ ಮಗ ಅಗಿದ್ದ ಕೃಷ್ಣಬೈರೇಗೌಡರು ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿದ್ದವರು. ತಮ್ಮ ತಂದೆಯ ನಿಧನದ ನಂತರ ಕ್ಷೇತ್ರದ ಜನತೆಯ ಒತ್ತಾಯದ ಮೇರೆಗೆ ಭಾರತಕ್ಕೆ ಬಂದು ರಾಜ್ಯದ ರಾಜಕಾರಣಕ್ಕೆ ಬಂದವರು. ರಾಜ್ಯದ ಆಡಳಿತದಲ್ಲಿ ಶಾಸಕರಾಗಿ, ಸಚಿವರಾಗಿ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿ ಸದನದಲ್ಲಿ ಹಲವಾರು ಸಲಹೆಗಳನ್ನು ಮಾರ್ಗದರ್ಶನವನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಸಚಿವ ಸ್ಥಾನದ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿ ವಿಪಕ್ಷಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.
ಪ್ರಸ್ತುತ ಕೃಷ್ಣ ಬೈರೇಗೌಡರಿಗೆ ಕೃಷಿ ಅಥಾವ ತೋಟಗಾರಿಕೆ ಖಾತೆ ನೀಡುತ್ತಾರೆಂಬ ನಿರೀಕ್ಷೆ ಇತ್ತು. ಅದರೆ ಈಗಾ ಅವರಿಗೆ ಕಂದಾಯ ಇಲಾಖೆ ಖಾತೆ ನೀಡಿರುವುದರಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಈ ಖಾತೆಯ ವ್ಯಾಪ್ತಿಗೆ ಬರಲಿರುವುದರಿಂದ ಹೆಚ್ಚಿನ ಜವಾಬ್ದಾರಿಯಿದೆ. ಇದನ್ನು ನಿಬಾಯಿಸುವಲ್ಲಿ ಯಶ್ವಸ್ಸಿಯಾಗುತ್ತಾರೆ ಎಂಬ ವಿಶ್ವಾಸವು ಇದೆ.
ಕೃಷ್ಣಬೈರೇಗೌಡರ ತವರು ಕೋಲಾರ ಜಿಲ್ಲೆಗೆ ಉಸ್ತುವಾರಿ ಸಚಿವ ಸ್ಥಾನ ನೀಡಿದಲ್ಲಿ ಕೋಲಾರವು ಅಭಿವೃದ್ದಿ ಹೊಂದುವುದರಲ್ಲಿ ಯಾವೂದೇ ಸಂಶಯವಿಲ್ಲ ವಿಶೇಷವಾದ ಕಾಳಜಿಯಿಂದ ಜನ್ಮ ನೀಡಿದ ಜಿಲ್ಲೆಯ ಋಣ ತೀರಿಸಿ ಕೊಳ್ಳಲು ಮುಂದಾಗಲಿದ್ದಾರೆ. ಕೋಲಾರ ಜಿಲ್ಲೆಯನ್ನು ವಿಶೇಷವಾಗೊ ಅಭಿವೃದ್ದಿ ಪಡೆಸುವರೆಂಬ ಆಶಯ ಕ್ಷೇತ್ರದ ಜನತೆಯದ್ದಾಗಿದೆ.