ಕೃಷ್ಣ ನದಿ ಸೇತುವೆ ಜ.೧೭ವರೆಗೆ ಸಂಚಾರಕ್ಕೆ ಅವಕಾಶ

ರಾಯಚೂರು, ಜ.೧೧-ಕೃಷ್ಣ ನದಿ ಸೇತುವೆ ಮೇಲೆ ವಾಹನ ಸಂಚಾರ ನಿಷೇಧ ಸಂಕ್ರಾಂತಿ ಹಬ್ಬ ಮತ್ತು ಮೈಲಾಪೂರು ಜಾತ್ರೆ ಹಿನ್ನಲೆಯಲ್ಲಿ ದಿ.೧೭ ವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚೆಸಿ ಸೂಚಿಸಲಾಗಿದೆ ಎಂದು ಶಾಸಕ ಶಿವರಾಜ ಪಾಟೀಲ್ ಅವರು ತಿಳಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ಕೃಷ್ಣನದಿ ಸೇತುವೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಇದೇ ಜ.೧೦ ರಿಂದ ರಸ್ತೆ ಸಂಚಾರ ಬಂದ್ ಮಾಡಲು ಸಭೆ ಮಾಡಿ ತಿಳಿಸಲಾಗಿತ್ತು.ಕೃಷ್ಣ ನದಿ ಸೇತುವೆ ಬಂದ್ ನಿಂದಾಗಿ ಸಾರ್ವಜನಿಕರು ಈ ಬಗ್ಗೆ ಪರಿಶೀಲಿಸಲು ತಿಳಿಸಿದ್ದು, ಈ ಕುರಿತು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರ ಜೊತೆ ಚರ್ಚಿಸಿ ಜ.೧೪ ಸಂಕ್ರಾಂತಿ ಹಬ್ಬ ಇರುವುದರಿಂದ ಜನರು ಸ್ನಾನಕ್ಕಾಗಿ ಕೃಷ್ಣನದಿಗೆ ತೆರಳುತ್ತಾರೆ, ಜೊತೆಗೆ ಯಾದಗಿರಿ ಜಿಲ್ಲೆಯ ಮೈಲಾಪೂರ ಮಲ್ಲಯ್ಯ ಜಾತ್ರೆ ಇದ್ದು, ಸಾವಿರಾರು ಭಕ್ತರು ಕೃಷ್ಣ ನದಿ ಸೇತುವೆ ಮೇಲೆಯೇ ಹಾದು ಹೋಗಬೇಕಾಗಿದೆ, ಈ ಹಿನ್ನೆಲೆಯಲ್ಲಿ ಜ.೧೭ ರವರೆಗೆ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ತಿಳಿದಿದ್ದು ಇದಕ್ಕೆ ಜಿಲ್ಲಾಧಿಕಾರಿಗಳು ಸ್ಪಂದಿಸಿ ದ್ದಾರೆ ಎಂದು ತಿಳಿಸಿದ್ದಾರೆ.