ಕೃಷ್ಣಾ ಮೇಲ್ದಂಡೆ ಯೋಜನೆ ಸಲಹಾ ಸಮಿತಿ ರಚಿಸಲು ಶಾಸಕ ಪಾಟೀಲ ಮನವಿ

ಇಂಡಿ: ಜು.26:ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಆಯ್.ಸಿ.ಸಿ ಯನ್ನು ರಚಿಸುವಂತೆ ಹಾಗೂ ನೀರಾವರಿ ಸಲಹಾ ಸಮೀತಿ ಸಭೆಯನ್ನು ಕರೆಯುವ ಕುರಿತು ಉಪಮುಖ್ಯ ಮಂತ್ರಿ ಡಿ.ಕೆ ಶಿವುಕುಮಾರವರಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಮನವಿ ಮಾಡಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಇದುವರೆಗೂ ನೇಮಕಾತಿ ಮಾಡಿಲ್ಲ ಸದರಿ ಯೋಜನೆ ಸಲಹಾ ಸಮಿತಿ ಅವಶ್ಯಕವಾಗಿದೆ. ವಾಡಿಕೆಯಂತೆ ಪ್ರತಿ ವರ್ಷ ಜುಲೈ -15 ಕ್ಕೆ ನೀರು ಹರಿಸುವುದು ಸಂಪ್ರದಾಯ, ಆದರೆ ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಕಾಲುವೆಗಳಿಗೆ ನೀರು ಹರಿಸಿಲ್ಲ .ಪ್ರಸ್ತುತ ಮಹಾರಾಷ್ಟ್ರ ಭಾಗದಲ್ಲಿ ಯಥೇಚ್ಛ ಮಳೆ ಸುರಿಯುತ್ತಿದೆ ಆಲಿಮಟ್ಟಿ ಜಲಾಶೆಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿರುತ್ತದೆ. ಆದಕಾರಣ ತುರ್ತಾಗಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆದು ಕಾಲುವೆಗಳಿಗೆ ನೀರು ಹರಿಸುವುದರ ಬಗ್ಗೆ ತೀರ್ಮಾನ ಕೈಗೋಳ್ಳುವುದು ಅತೀ ಅವಶ್ಯಕವಾಗಿದೆ .ಆದ್ದರಿಂದ ರಾಜ್ಯ ಸರಕಾರ ಕೂಡಲೇ ಕೃಷ್ಣಾ ನದಿ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಆಯ್.ಸಿ.ಸಿ ಯನ್ನು ರಚಿಸುವುದು ಹಾಗೂ ನೀರಾವರಿ ಸಲಹಾ ಸಮಿತಿ ಕರೆದು ಆ ಭಾಗಗಳ ಜನಪ್ರತಿನಿಧಿಗಳ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅವರು ಉಪಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ.